ADVERTISEMENT

ಅಸ್ಸಾಂ: 8 ಜಿಲ್ಲೆಗಳಿಗೆ ಆಫ್‌ಸ್ಪಾ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 13:16 IST
Last Updated 30 ಮಾರ್ಚ್ 2023, 13:16 IST
......
......   

ಗುವಾಹಟಿ: ಸಶಸ್ತ್ರ ಪಡೆ ವಿಶೇಷಾಧಿಕಾರ ಕಾಯ್ದೆ (ಆಫ್‌ಸ್ಪಾ) ಅಡಿ ಅಸ್ಸಾಂನ ಎಂಟು ಜಿಲ್ಲೆಗಳಿಗೆ ನೀಡಲಾಗಿದ್ದ ‘ಪ್ರಕ್ಷ್ಯುಬ್ದ ಪ್ರದೇಶಗಳು’ ಎಂಬ ಪಟ್ಟಿಯನ್ನು ಮುಂದಿನ ಆರು ತಿಂಗಳ ಅವಧಿಗೆ ಮುಂದುವರಿಸುವುದಾಗಿ ಅಸ್ಸಾಂ ಸರ್ಕಾರ ಹೇಳಿದೆ. ಈ ಕ್ರಮವು ಏಪ್ರಿಲ್‌ 1ರಿಂದಲೇ ಜಾರಿಗೆ ಬರಲಿದೆ.

ತಿನ್‌ಸುಕಿಯಾ, ಡಿಬ್ರುಗರ್‌, ಚರೈಡಿಯೊ, ಸಿವಸಾಗರ್‌, ಜೀರ್ಹಾಟ್‌, ಗೋಲಾಘಾಟ್‌, ಕಬ್ರಿ, ಆಂಗ್ಲಾಂಗ್‌ ಮತ್ತು ದಿಮಾ ಹಸಾವೊ ಜಿಲ್ಲೆಗಳಿಗೆ ಈ ಪಟ್ಟಿಯನ್ನು ಮುಂದುವರಿಸಲಾಗುತ್ತದೆ.

ರಾಜ್ಯದಲ್ಲಿಯ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಪರಿಶೀಲಿಸಿದ ಬಳಿಕ ಕಛಾಡ್‌ ಜಿಲ್ಲೆಯ ಉಪವಿಭಾಗೀಯ ಕೇಂದ್ರವಾದ ಲಾಖಿಪುರ್‌ನಿಂದ ಆಫ್‌ಸ್ಪಾ ಹಿಂಪಡೆಯಲಾಗಿದೆ.

ADVERTISEMENT

ಎಂಟು ಜಿಲ್ಲೆಗಳು ಮತ್ತು ಒಂದು ಉಪವಿಭಾಗೀಯ ಕೇಂದ್ರವನ್ನು ಹೊರತುಪಡಿಸಿ ಅಸ್ಸಾಂ ಆದ್ಯಂತ ಆಫ್‌ಸ್ಪಾವನ್ನು 2022ರ ಏಪ್ರಿಲ್‌ 1ರಿಂದ ಹಿಂಪಡೆಯಲಾಗುವುದು ಎಂದು ಕೇಂದ್ರ ಸರ್ಕಾರ ಈ ಹಿಂದೆಯೇ ಘೋಷಣೆ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.