ADVERTISEMENT

ತೆಲಂಗಾಣ: ಅಧಿಕಾರ ಕಳೆದುಕೊಂಡ ಬಳಿಕ ಬಿಆರ್‌ಎಸ್‌ ಪಕ್ಷದ ದೇಣಿಗೆ ಇಳಿಕೆ

ಏಜೆನ್ಸೀಸ್
Published 28 ಅಕ್ಟೋಬರ್ 2025, 6:14 IST
Last Updated 28 ಅಕ್ಟೋಬರ್ 2025, 6:14 IST
<div class="paragraphs"><p>ಬಿಆರ್‌ಎಸ್‌ ಪಕ್ಷದ ನಾಯಕ ಕೆ. ಚಂದ್ರಶೇಖರ ರಾವ್</p></div>

ಬಿಆರ್‌ಎಸ್‌ ಪಕ್ಷದ ನಾಯಕ ಕೆ. ಚಂದ್ರಶೇಖರ ರಾವ್

   

ಹೈದರಾಬಾದ್: 2023ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಅಧಿಕಾರ ಕಳೆದುಕೊಂಡ ಬಳಿಕ ಕಳೆದ ಹಣಕಾಸು ವರ್ಷದಲ್ಲಿ ಅತಿ ಕಡಿಮೆ ದೇಣಿಗೆ ಸ್ವೀಕರಿಸಿದೆ.

2024-25ನೇ ಹಣಕಾಸು ವರ್ಷದಲ್ಲಿ ಬಿಆರ್‌ಎಸ್‌ ಕೇವಲ ₹15 ಕೋಟಿ ದೇಣಿಗೆಯನ್ನು ಸ್ವೀಕಾರ ಮಾಡಿದೆ. ಹಿಂದಿನ (2023–24ನೇ) ವರ್ಷದಲ್ಲಿ ₹580 ಕೋಟಿಗೂ ಹೆಚ್ಚು ಮೊತ್ತದ ದೇಣಿಗೆ ಪಡೆದಿತ್ತು. ಹಾಗೂ 2022-23ನೇ ವರ್ಷದಲ್ಲಿ ಒಟ್ಟು ₹683 ಕೋಟಿ ದೇಣಿಗೆ ಪಡೆದಿತ್ತು.

ADVERTISEMENT

ಚಂದ್ರಶೇಖರ ರಾವ್ (ಕೆಸಿಆರ್‌) ನೇತೃತ್ವದ ಬಿಆರ್‌ಎಸ್‌ ಪಕ್ಷ ಅಧಿಕಾರ ಕಳೆದುಕೊಂಡ ಬಳಿಕ ಅತಿ ಕಡಿಮೆ ದೇಣಿಗೆ ಸ್ವೀಕಾರ ಮಾಡಿದೆ ಎಂದು ಚುನಾವಣೆ ಆಯೋಗದ ಅಂಕಿ–ಅಂಶಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.