ಹಿಮಾಚಲಪ್ರದೇಶದ ಸರ್ಕಾರಿ ಬಸ್‌ನ ಗಾಜು ಭಾಗಶಃ ಹಾನಿಗೊಂಡಿರುವುದು
Credit: X/@erbmjha
ಅಮೃತಸರ: ಪಂಜಾಬ್‌ನ ಅಮೃತಸರದ ಬಸ್‌ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿದ್ದ ಹಿಮಾಚಲಪ್ರದೇಶದ ನಾಲ್ಕು ಸರ್ಕಾರಿ ಬಸ್‌ಗಳ ಗಾಜಿಗೆ ಅಪರಿಚಿತ ವ್ಯಕ್ತಿಗಳು ಶನಿವಾರ ಹಾನಿ ಉಂಟುಮಾಡಿದ್ದಾರೆ.
ಹಾನಿಗೊಳಗಾಗಿರುವ ಬಸ್‌ಗಳ ಮೇಲೆ ಖಾಲಿಸ್ತಾನಿ ಪರ ಬರಹಗಳನ್ನು ಬರೆಯಲಾಗಿದೆ. ಘಟನೆ ನಡೆದಿರುವ ವೇಳೆ ಬಸ್ ಒಳಗಡೆ ಯಾರೂ ಇರಲಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ಇತ್ತೀಚೆಗೆ ಮೊಹಾಲಿಯ ಕರಾರ್‌ನಲ್ಲಿಯೂ ಹಿಮಾಚಲಪ್ರದೇಶದ ಸರ್ಕಾರಿ ಬಸ್‌ನ ಮುಂಭಾಗದ ಗಾಜು ಮತ್ತು ಕಿಟಕಿಗಳನ್ನು ಒಡೆದುಹಾಕಲಾಗಿತ್ತು
ಖಾಲಿಸ್ತಾನಿ ಪರ ಹೋರಾಟಗಾರ ಜರ್ನೈಲ್ ಸಿಂಗ್ ಚಿತ್ರವಿದ್ದ ಬಾವುಟವನ್ನು, ಪಂಜಾಬ್‌ನಿಂದ ಬಂದಿದ್ದ ಯುವಕರ ಬೈಕ್‌ನಿಂದ ಹಿಮಾಚಲ ಪ್ರದೇಶದ ಸ್ಥಳೀಯರು ಇತ್ತೀಚೆಗೆ ತೆರವುಗೊಳಿಸಿದ್ದರು. ಇದು ಖಾಲಿಸ್ತಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ದಾಲ್ ಖಾಲ್ಸಾ ಮತ್ತು ಸಿಖ್ ಯೂತ್ ಆಫ್ ಪಂಜಾಬ್‌ನ ಕಾರ್ಯಕರ್ತರು ಭಿಂದ್ರನ್‌ವಾಲೆಯ ಚಿತ್ರಗಳನ್ನು ಹಿಮಾಚಲಪ್ರದೇಶದ ಸರ್ಕಾರಿ ಮತ್ತು ಖಾಸಗಿ ಬಸ್‌ಗಳಿಗೆ ಅಂಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.