ADVERTISEMENT

ತಾಜ್‌ಮಹಲ್ ವೀಕ್ಷಣೆಗೆ ಅವಕಾಶ

6 ತಿಂಗಳ ಬಳಿಕ ನಿರ್ಬಂಧದ ನಡುವೆ ವೀಕ್ಷಣೆಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2020, 14:50 IST
Last Updated 20 ಸೆಪ್ಟೆಂಬರ್ 2020, 14:50 IST
ತಾಜ್ ಮಹಲ್
ತಾಜ್ ಮಹಲ್   

ಲಖನೌ:‘ಆರು ತಿಂಗಳ ಬಳಿಕಕೆಲ ನಿರ್ಬಂಧಗಳ ನಡುವೆಪ್ರವಾಸಿಗರಿಗೆ ತಾಜ್‌ಮಹಲ್ ವೀಕ್ಷಿಸಲು ಸೋಮವಾರದಿಂದ ಅವಕಾಶ ಕಲ್ಪಿಸಲಾಗಿದೆ’ ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಪ್ರವಾಸಿಗರು ಆನ್‌ಲೈನ್‌ನಲ್ಲೇ ಟಿಕೆಟ್ ಖರೀದಿಸಬೇಕು. ಭೇಟಿ ನೀಡುವವರು ಮಾಸ್ಕ್ ಧರಿಸುವುದು, ಅಂತರ ಪಾಲಿಸುವುದು ಕಡ್ಡಾಯ. ಥರ್ಮಲ್ ಸ್ಕ್ಯಾನಿಂಗ್ ನಂತರವೇ ಸಂದರ್ಶಕರಿಗೆ ಪ್ರವೇಶ ಕಲ್ಪಿಸಲಾಗುವುದು’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ತಾಜ್‌ಮಹಲ್ ಕಟ್ಟಡ ಸಂಕೀರ್ಣದ ಒಳಗೆ ಗುಂಪು ಛಾಯಾಚಿತ್ರಕ್ಕೆ ಅವಕಾಶ ಇರುವುದಿಲ್ಲ. ಶಹಜಹಾನ್ ಮತ್ತು ಮುಮ್ತಾಜ್ ಅವರ ಸಮಾಧಿ ಇರುವ ಸ್ಥಳಕ್ಕೆ ಏಕಕಾಲಕ್ಕೆ ಐವರಿಗಷ್ಟೇ ಭೇಟಿ ನೀಡಲು ಅವಕಾಶ ನೀಡಲಾಗುವುದು. ಸಂದರ್ಶಕರು ಕಟ್ಟಡದ ಗೋಡೆಗಳನ್ನು ಮುಟ್ಟುವಂತಿಲ್ಲ’ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.