ಕ್ಷಿಪಣಿ ಪರೀಕ್ಷೆ
–ಪಿಟಿಐ ಚಿತ್ರ
ಬಾಲೇಶ್ವರ (ಒಡಿಶಾ): ಮಧ್ಯಂತರ ಶ್ರೇಣಿಯ ಪರಮಾಣು ಸಿಡಿತಲೆಗಳನ್ನು ಹೊತ್ತಯ್ಯಬಲ್ಲ ದೇಶೀಯವಾಗಿ ತಯಾರಿಸಿದ ಖಂಡಾಂತರ ಕ್ಷಿಪಣಿ ‘ಅಗ್ನಿ–5’ರ ಪರೀಕ್ಷಾರ್ಥ ಪ್ರಯೋಗವು ಒಡಿಶಾದ ಚಾಂದೀಪುರದಲ್ಲಿ ಬುಧವಾರ ಯಶಸ್ವಿಯಾಗಿ ನಡೆಯಿತು ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.
5,000 ಕಿ.ಮೀ. ವ್ಯಾಪ್ತಿಯ ಶತ್ರು ನೆಲೆಗಳ ಮೇಲೆ ದಾಳಿ ನಡೆಸಬಲ್ಲ ಕ್ಷಿಪಣಿ ಇದಾಗಿದೆ.
ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ನೇತೃತ್ವದಲ್ಲಿ 2012ರ ಏಪ್ರಿಲ್ 19ರಂದು ಅಗ್ನಿ ಕ್ಷಿಪಣಿಯ ಮೊದಲ ಪರೀಕ್ಷಾರ್ಥ ಉಡಾವಣೆ ನಡೆದಿತ್ತು. ಎರಡನೇ ಪರೀಕ್ಷಾರ್ಥ ಉಡಾವಣೆಯಲ್ಲೂ ಅಗ್ನಿ–5 ಯಶಸ್ವಿಯಾಗಿತ್ತು.
ಅಗ್ನಿ–5 ಕ್ಷಿಪಣಿ ಒಂದು ಟನ್‌ಗಿಂತಲೂ ಹೆಚ್ಚು ಭಾರದ ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಇದು ಸ್ವಯಂಚಾಲಿತ ಸೌಲಭ್ಯವನ್ನೂ ಹೊಂದಿದೆ. ವಿವಿಧ ರೇಡಾರ್ ಮತ್ತು ಸಂಪರ್ಕ ವ್ಯವಸ್ಥೆಯ ಮೂಲಕವೂ ಮಾಹಿತಿ ಪಡೆಯುವ ವಿಶೇಷ ಗುಣ ಇದಕ್ಕಿದೆ ಎಂದು ಡಿಆರ್‌ಡಿಒ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.