ADVERTISEMENT

Ahmedabad Plane Crash| ಮೃತರ ಸಂಖ್ಯೆ 279ಕ್ಕೆ ಏರಿಕೆ: ಪೊಲೀಸ್‌ ಮೂಲಗಳ ಮಾಹಿತಿ

ಏಜೆನ್ಸೀಸ್
Published 14 ಜೂನ್ 2025, 5:35 IST
Last Updated 14 ಜೂನ್ 2025, 5:35 IST
   

ಅಹಮದಾಬಾದ್: ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 279ಕ್ಕೆ ಏರಿಕೆಯಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಘಟನೆಯಲ್ಲಿ ವಿಮಾನದಲ್ಲಿದ್ದ 241 ಪ್ರಯಾಣಿಕರು ಮೃತಪಟ್ಟಿದ್ದರು.

ಅಹಮದಾಬಾದ್‌ನಿಂದ ಲಂಡನ್‌ನಿಂದ ತೆರಳಬೇಕಿದ್ದ ವಿಮಾನವು ಟೆಕ್‌ಆಫ್‌ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು ವೈದ್ಯಕೀಯ ವಿದ್ಯಾರ್ಥಿಗಳ ಹಾಸ್ಟೆಲ್‌ ಕಟ್ಟಡದ ಮೇಲೆ ಅಪ್ಪಳಿಸಿ, ಅಲ್ಲಿದ್ದವರು ಕೂಡ ಪ್ರಾಣ ಕಳೆದುಕೊಂಡಿದ್ದರಿಂದ ಮೃತರ ಸಂಖ್ಯೆ ಕನಿಷ್ಠ 265 ಆಗಿತ್ತು.

ADVERTISEMENT

ದುರಂತದಲ್ಲಿ ವಿಮಾನದ ಇಂಧನ ಸ್ಪೋಟಗೊಂಡ ಕಾರಣ ಮೃತಪಟ್ಟವರ ದೇಹಗಳು ಛಿದ್ರವಾಗಿದ್ದು, ನಿಖರ ಸಂಖ್ಯೆ ಪತ್ತೆಮಾಡಲು ಡಿ.ಎನ್‌.ಎ ಪರೀಕ್ಷೆ ಮಾಡಲಾಗುತ್ತಿದೆ. ಅದು ಪೂರ್ಣಗೊಂಡ ನಂತರವಷ್ಟೇ ಮೃತಪಟ್ಟವರ ನಿಖರ ಸಂಖ್ಯೆ ತಿಳಿಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.