ಮುಖಪುಟದಲ್ಲಿ ಕಪ್ಪು ಪಟ್ಟಿ ಇಟ್ಟು ಗೂಗಲ್ ಸಂತಾಪ
ನವದೆಹಲಿ: ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟವರಿಗಾಗಿ ಟೆಕ್ ದೈತ್ಯ ಗೂಗಲ್ ತನ್ನ ವೆಬ್‌ಸೈಟ್‌ನ ಮುಖಪುಟದಲ್ಲಿ ಕಪ್ಪು ಬಣ್ಣದ ಪಟ್ಟಿಯಿಟ್ಟು ಸಂತಾಪ ಸೂಚಿಸಿದೆ.
ಸರ್ಚ್‌ಬಾರ್ ಕೆಳಗಡೆ ಕಪ್ಪು ಬಣ್ಣದ ರಿಬ್ಬನ್ ರೀತಿ ಇರಿಸಿದೆ. ಇದಕ್ಕೆ ‘ವಿಮಾನ ಅಪಘಾತದಲ್ಲಿ ಮೃತಪಟ್ಟವರ ನೆನಪಿಗಾಗಿ’ ಎಂದು ಬರೆಯಲಾಗಿದೆ.
ಗುಜರಾತ್‌ನ ಅಹಮದಾಬಾದ್‌ನ ಸರ್ಧಾರ್ ವಲಭಭಾಯಿ ಪಟೇಲ್ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ಎಐ 171 ವಿಮಾನ ಗುರುವಾರ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿದ್ದ ಹಾಸ್ಟೆಲ್ ಮೇಲೆ ಪತನಗೊಂಡು 241 ಮಂದಿ ಪ್ರಯಾಣಿಕರು ಸೇರಿ ಒಟ್ಟು 265 ಜನ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ ರೂಪಾನಿ ಕೂಡ ಮೃತಪಟ್ಟಿದ್ದಾರೆ.
ದುರಂತಕ್ಕೆ ದೇಶದ ಗಣ್ಯರು ಮಾತ್ರವಲ್ಲದೆ ವಿದೇಶಿ ನಾಯಕರೂ ಆಘಾತ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.