ADVERTISEMENT

ಕೋವಿಡ್-19: ಗುಜರಾತ್‌ನ ನಾಲ್ಕು ಮಹಾನಗರಗಳಲ್ಲಿ ರಾತ್ರಿ ಕರ್ಫ್ಯೂ

ಏಜೆನ್ಸೀಸ್
Published 22 ನವೆಂಬರ್ 2020, 14:20 IST
Last Updated 22 ನವೆಂಬರ್ 2020, 14:20 IST
ಅಹಮದಾಬಾದ್ ನಗರ
ಅಹಮದಾಬಾದ್ ನಗರ   

ಅಹಮದಾಬಾದ್‌: ಕೊರೊನಾ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಗುಜರಾತ್‌ನ ನಾಲ್ಕು ಮಹಾನಗರಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ.

ಅಹಮದಾಬಾದ್‌, ಸೂರತ್‌, ವಡೋದರಾ ಮತ್ತು ರಾಜ್‌ಕೋಟ್‌ಗಳಲ್ಲಿ ರಾತ್ರಿ 9ರಿಂದ ಬೆಳಿಗ್ಗೆ 6ರ ವರೆಗೆ ಕರ್ಫ್ಯೂ ಜಾರಿಗೊಳಿಸಿ ಗುಜರಾತ್‌ ಸರ್ಕಾರ ಆದೇಶಿಸಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ, 'ಗುಜರಾತ್‌ನ ನಾಲ್ಕು ಮಹಾನಗರಗಳಲ್ಲಿ ನವೆಂಬರ್‌ 22ರಿಂದ ಕಟ್ಟುನಿಟ್ಟಿನ ಕರ್ಫ್ಯೂ ಜಾರಿಗೊಳಿಸಲಾಗುವುದು. ಅಹಮದಾಬಾದ್‌, ಸೂರತ್, ವಡೋದರಾ ಮತ್ತು ರಾಜ್‌ಕೋಟ್‌ಗಳಲ್ಲಿ ರಾತ್ರಿ 9ರಿಂದ ಬೆಳಿಗ್ಗೆ 6ರ ವರೆಗೆ ಕರ್ಫ್ಯೂ ಇರಲಿದೆ' ಎಂದು ಹೇಳಿದ್ದಾರೆ.

ADVERTISEMENT

ಹಬ್ಬಗಳ ಸಂದರ್ಭದಲ್ಲಿ ಜನಸಂದಣಿ ಹೆಚ್ಚಾಗಿದ್ದು, ಸೋಂಕು ಪ್ರಕರಣಗಳ ಹಠಾತ್ ಏರಿಕೆಗೆ ಕಾರಣ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.