ನವದೆಹಲಿ: ಡೀಪ್‌ಫೇಕ್ ಮತ್ತು ಕೃತಕ ಬುದ್ಧಿಮತ್ತೆ(ಎ.ಐ) ಮೂಲಕ ಮಕ್ಕಳ ಮೇಲಿನ ದೌರ್ಜ್ಯನ್ಯಗಳ ನಿಗ್ರಹಕ್ಕೆ ಸೂಕ್ತ ಕ್ರಮಕೈಗೊಳ್ಳುವುದು ಅತ್ಯಗತ್ಯವಾಗಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ವಿ ನಾಗರತ್ನಾ ಅವರು ಭಾನುವಾರ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ಸೂಕ್ತ ಮುನ್ನೆಚ್ಚರಿಕೆಯ ಮೂಲಕ ನಾವು ದೌರ್ಜನ್ಯ ಮತ್ತು ಮಕ್ಕಳ ಕಳ್ಳಸಾಗಾಣಿಕೆಯನ್ನು ತಡೆಯಲು ಸಾಧ್ಯವಿದೆ’ ಎಂದು ಹೇಳಿದರು.
‘ವಿಕಾಸಗೊಳ್ಳುತ್ತಿರುವ ತಂತ್ರಜ್ಞಾನಗಳು ಉಂಟು ಮಾಡುತ್ತಿರುವ ಅಪಾಯಗಳು ಜಗತ್ತಿಗೆ ತೂಗುಗತ್ತಿಯಂತಾಗಿವೆ. ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ವಿಚಾರಗಳ ಮೇಲೆ ನಿಗಾ ಇಡಲು ಮತ್ತು ಆನ್‌ಲೈನ್ ವೇದಿಕೆಗಳಲ್ಲಿ ವಯಸ್ಸಿನ ಮಿತಿ ಹೇರಲು ಸೂಕ್ತ ಕಾನೂನು ರೂಪಿಸಬೇಕು’ ಎಂದು ತಿಳಿಸಿದರು.
‘ಎಐ ಮತ್ತು ಇತರ ತಂತ್ರಜ್ಞಾನಗಳು ಹೆಣ್ಣುಮಕ್ಕಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ಅವುಗಳನ್ನು ಹೇಗೆ ನಿಗ್ರಹಿಸಬಹುದು ಎಂಬುವುದರ ಕುರಿತು ಅಧ್ಯಯನಕ್ಕೆ ‘ಹೆಣ್ಣುಮಕ್ಕಳ ವಿರುದ್ಧದ ಎ.ಐ ಸೈಬರ್ ಅಪರಾಧಗಳ ನಿಗ್ರಹ ಸಲಹಾ ಸಮಿತಿ’ ರಚನೆಯ ಸಾಧ್ಯತೆಯನ್ನು ಸುಪ್ರೀಂ ಕೋರ್ಟ್ ಪರಿಗಣಿಸಬಹುದು’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.