ನವದೆಹಲಿ:ದೇಶದಲ್ಲಿರುವ ವಿದೇಶಿಯರನ್ನು ಅವರ ದೇಶಕ್ಕೆ ಕಳುಹಿಸಲು ಏರ್ ಇಂಡಿಯಾವಿಶೇಷ ವಿಮಾನಗಳ ವ್ಯವಸ್ಥೆ ಮಾಡಿದ್ದು, ಈ ವಿಮಾನಗಳು ಏಪ್ರಿಲ್ 4 ಮತ್ತು 7ರ ನಡುವೆ ಲಂಡನ್‌ಗೆ ತೆರಳಲಿವೆ.
‘ನಾಲ್ಕು ವಿಮಾನಗಳು ದೆಹಲಿಯಿಂದ ಲಂಡನ್‌ಗೆ ಈ ಅವಧಿಯಲ್ಲಿ ಪ್ರಯಾಣ ಬೆಳೆಸಲಿವೆ. ಏಪ್ರಿಲ್ 5 ಮತ್ತು 7ರ ನಡುವೆ ಮುಂಬೈ– ಲಂಡನ್ ಮಾರ್ಗವಾಗಿಯೂ ವಿಮಾನಗಳ ವ್ಯವಸ್ಥೆ ಮಾಡಲಾಗಿದೆ’ ಎಂದು ಏರ್ ಇಂಡಿಯಾ ಅಧಿಕಾರಿಗಳು ತಿಳಿಸಿದ್ದಾರೆ.
‘ಲಂಡನ್‌ನಿಂದ ವಾಪಾಸಾಗುವ ಈ ವಿಮಾನಗಳಲ್ಲಿ ಭಾರತೀಯರನ್ನು ಕರೆತರುವ ಯೋಚನೆಯಿಲ್ಲ’ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕೊರೊನಾ ವೈರಸ್ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ವಿಮಾನಗಳ ಹಾರಾಟದ ಮೇಲೆ ಏಪ್ರಿಲ್ 14ರವರೆಗೆ ನಿಷೇಧ
ವಿಧಿಸಿರುವುದರಿಂದ ಈ ನಿರ್ಧಾರ
ತೆಗೆದುಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.