ADVERTISEMENT

ಎಐಎಡಿಎಂಕೆ ವಿವಾದ: 3 ವಾರಗಳಲ್ಲಿ ತೀರ್ಪು ನೀಡಲು ‘ಸುಪ್ರೀಂ’ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2022, 11:29 IST
Last Updated 29 ಜುಲೈ 2022, 11:29 IST
ಸಮಾರಂಭವೊಂದರಲ್ಲಿ ಮಾಜಿ ಸಿಎಂ ಪಳನಿಸ್ವಾಮಿ ಮತ್ತು ಪನ್ನೀರ ಸೆಲ್ವಂ
ಸಮಾರಂಭವೊಂದರಲ್ಲಿ ಮಾಜಿ ಸಿಎಂ ಪಳನಿಸ್ವಾಮಿ ಮತ್ತು ಪನ್ನೀರ ಸೆಲ್ವಂ    

ನವದೆಹಲಿ: ಇತ್ತೀಚೆಗೆ ನಡೆದ ಎಐಎಡಿಎಂಕೆ ಪಕ್ಷದ ಸಾಮಾನ್ಯ ಸಭೆಯಲ್ಲಿತಮ್ಮನ್ನು ಪಕ್ಷದಿಂದ ಉಚ್ಚಾಟಿಸಿರುವುದನ್ನು ಪ್ರಶ್ನಿಸಿ ಒ. ಪನ್ನೀರಸೆಲ್ವಂ (ಒಪಿಎಸ್‌) ಮತ್ತು ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿ ಮೂರು ವಾರಗಳ ಒಳಗೆ ತೀರ್ಪು ನೀಡುವಂತೆ ಮದ್ರಾಸ್‌ ಹೈಕೋರ್ಟ್‌ಗೆ, ಸುಪ್ರೀಂಕೋರ್ಟ್‌ ಶುಕ್ರವಾರ ಸೂಚಿಸಿದೆ.

ಮುಖ್ಯನ್ಯಾಯಮೂರ್ತಿ ಎನ್‌.ವಿ. ರಮಣ ಅವರ ನೇತೃತ್ವದ ಪೀಠವು, ಪಕ್ಷದ ವ್ಯವಹಾರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಎಡಪ್ಪಾಡಿ ಪಳನಿಸ್ವಾಮಿ (ಇಪಿಎಸ್‌) ಮತ್ತು ಇವರ ವಿರೋಧಿ ಒಪಿಎಸ್‌ ಬಣಗಳಿಗೆ ಸೂಚನೆ ನೀಡಿದೆ.

ಇತ್ತೇಚೆಗೆ ನಡೆದಪಕ್ಷದ ಸಾಮಾನ್ಯ ಸಭೆಯಲ್ಲಿ ‘ದ್ವಿ ನಾಯಕತ್ವ ಮಾದರಿ’ಯನ್ನು ಕೊನೆಗೊಳಿಸಿ, ಇಪಿಎಸ್‌ ಅವರನ್ನು ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಪಕ್ಷ ವಿರೋಧಿ ಚುಟವಟಿಕೆ ಆಪಾದನೆ ಮೇರೆಗೆ ಒಪಿಎಸ್‌ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.