ADVERTISEMENT

ಜಯಲಲಿತಾ ಆಪ್ತೆ ಶಶಿಕಲಾ ಪ್ರಯತ್ನ ಫಲಿಸದು: ಎಐಎಡಿಎಂಕೆ ನಾಯಕ ಡಿ.ಜಯಕುಮಾರ್

​ಪ್ರಜಾವಾಣಿ ವಾರ್ತೆ
Published 16 ಜೂನ್ 2021, 15:31 IST
Last Updated 16 ಜೂನ್ 2021, 15:31 IST
ವಿ.ಕೆ. ಶಶಿಕಲಾ
ವಿ.ಕೆ. ಶಶಿಕಲಾ   

ಚೆನ್ನೈ (ಪಿಟಿಐ): ‘ಜಯಲಲಿತಾ ಆಪ್ತೆ ಹಾಗೂ ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ.ಕೆ. ಶಶಿಕಲಾ ಅವರು ತಮ್ಮ ‘ಆಡಿಯೋ ರಾಜಕಾರಣ’ ಮತ್ತು ‘ಒಡೆದು ಆಳುವ ನೀತಿ’ಯಿಂದ ಪಕ್ಷದಲ್ಲಿ ಗೊಂದಲ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ. ಇದರಲ್ಲಿ ಅವರು ಸಫಲರಾಗುವುದಿಲ್ಲ’ ಎಂದು ಪಕ್ಷದ ಹಿರಿಯ ನಾಯಕ ಡಿ.ಜಯಕುಮಾರ್ ಕಿಡಿಕಾರಿದ್ದಾರೆ.

ಶಶಿಕಲಾ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವ ಹೊಂದಿಲ್ಲದಿದ್ದರೂ ಪಕ್ಷದ ಮೇಲೆ ಹೇಗೆ ಹಿಡಿತ ಸಾಧಿಸಲು ಸಾಧ್ಯ ಎಂದು ಮಾಜಿ ಸಚಿವರೂ ಆದ ಜಯಕುಮಾರ್‌ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಅವರನ್ನು ಪಕ್ಷದಿಂದ ಹೊರ ಹಾಕಿದ ಮೇಲೆ, ತೆರೆಮರೆಯಲ್ಲಿ ಇದ್ದುಕೊಂಡು ಪಕ್ಷದ ಪ್ರಮುಖರೊಂದಿಗೆ ದೂರವಾಣಿಯಲ್ಲಿ ಶಶಿಕಲಾ ಸಂವಹನ ನಡೆಸುತ್ತಿದ್ದು, ಪಕ್ಷದ ಆಗುಹೋಗುಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ‘ಇದು ಪಕ್ಷದಲ್ಲಿ ಗೊಂದಲ ಮೂಡಿಸುವ ಪ್ರಯತ್ನ’ ಎಂದು ಅವರು ಆರೋ‍ಪಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.