ADVERTISEMENT

ಚೇತರಿಕೆ ಬಳಿಕ ಲಸಿಕೆ ಪಡೆದರೆ ರೋಗನಿರೋಧಕ ಶಕ್ತಿ 10 ಪಟ್ಟು ಹೆಚ್ಚು

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 21:39 IST
Last Updated 11 ಜೂನ್ 2021, 21:39 IST
ಲಸಿಕೆ ತಯಾರಿಕೆ–ಸಾಂದರ್ಭಿಕ ಚಿತ್ರ
ಲಸಿಕೆ ತಯಾರಿಕೆ–ಸಾಂದರ್ಭಿಕ ಚಿತ್ರ   

ಹೈದರಾಬಾದ್‌: ಕೊರೊನಾ ವೈರಾಣು ಸೋಂಕಿಗೆ ಒಳಗಾಗದೇ, ಮೊದಲ ಡೋಸ್‌ ಲಸಿಕೆ ಪಡೆದವರಿಗೆ ಹೋಲಿಸಿದರೆ, ಒಂದು ಬಾರಿ ಕೊರೊನಾ ಸೋಂಕಿಗೆ ಒಳಗಾದ ಬಳಿಕ ಮೊದಲ ಡೋಸ್‌ ಲಸಿಕೆ ಪಡೆದವರಲ್ಲಿ ರೋಗ ನಿರೋಧಕ ಶಕ್ತಿ ಮತ್ತು ಸ್ಮರಣ ಜೀವಕೋಶಗಳ ಪ್ರತಿಕ್ರಿಯೆ 10 ಪಟ್ಟು ಹೆಚ್ಚಿದೆ. ಒಂದು ವರ್ಷಗಳ ಕಾಲ ಈ ಪ್ರತಿಕಾಯಗಳು ವೈರಾಣು ವಿರುದ್ಧ ಹೋರಾಡುತ್ತವೆ ಎಂದು ಏಷ್ಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಗ್ಯಾಸ್ಟ್ರೊಯೆಂಟೆರಾಲಜಿ (ಎಐಜಿ) ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ.

ಹೀಗಾಗಿ, ಕೊರೊನಾ ಸೋಂಕಿಗೆ ಒಳಗಾಗದವರು ಎರಡನೇ ಡೋಸ್‌ ಲಸಿಕೆಯನ್ನು ಈಗ ಆದ್ಯತೆ ಮೇರೆಗೆ ತೆಗೆದುಕೊಳ್ಳಬೇಕು. ಕೋವಿಡ್‌ನಿಂದ ಚೇತರಿಸಿಕೊಂಡ ಬಳಿಕ ಮೊದಲ ಡೋಸ್‌ ಪಡೆದುಕೊಂಡವರು ಮುಂದಿನ ವರ್ಷ ಎರಡನೇ ಡೋಸ್‌ ತೆಗೆದುಕೊಳ್ಳಬಹುದು ಎಂದು ಎಐಜಿ ಹೇಳಿದೆ.

ಐಸಿಎಂಆರ್‌ ಗುರುತಿಸಿರುವ ಕೋವಿಡ್‌–19 ಆರೈಕೆ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸಿದ 280 ಆರೋಗ್ಯ ಕಾರ್ಯಕರ್ತರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರೆಲ್ಲರೂ ಜನವರಿಯಿಂದ ಫೆಬ್ರುವರಿ ಒಳಗೆ ಕೋವಿಡ್‌ ಲಸಿಕೆ ಪಡೆದಿದ್ದರು. ಅವರಲ್ಲಿ 131 ಕಾರ್ಯಕರ್ತರಿಗೆ ಲಸಿಕೆ ಪಡೆಯುವ ಮುನ್ನ ಕೊರೊನಾ ಸೋಂಕು ದೃಢವಾಗಿತ್ತು. ಆ ಕಾರ್ಯಕರ್ತರ ದೇಹದಲ್ಲಿ ಪ್ರತಿಕಾಯಗಳು 10 ಪಟ್ಟು ಹೆಚ್ಚಾಗಿರುವುದು ಕಂಡುಬಂದಿದೆ ಎಂದು ಎಐಜಿ ಸಂಶೋಧಕರು ಮತ್ತು ಆಸ್ಪತ್ರೆ ಅಧ್ಯಕ್ಷ ಡಾ. ನಾಗೇಶ್ವರ್‌ ರೆಡ್ಡಿ ತಿಳಿಸಿದ್ದಾರೆ. ಈ ಸಂಶೋಧನೆ ಇಂಟರ್‌ನ್ಯಾಷನಲ್‌ ಜರ್ನಲ್‌ ಆಫ್‌ ಇನ್‌ಫೆಕ್ಷಿಯಸ್‌ ಡಿಸೀಸ್‌ ನಿಯತಕಾಲಿಕದಲ್ಲಿ ಪ್ರಕಟವಾಗಿದೆ. ದೇಶದಲ್ಲಿ ಕೋವಿಡ್‌ ಲಸಿಕೆಗಳ ಕೊರತೆ ಇರುವಾಗಲೇ ಈ ಶಿಫಾರಸ್ಸು ಹೊರಬಿದ್ದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.