ADVERTISEMENT

ತದ್ರೂಪಿ ಚೆಕ್‌ ಬಳಸಿ ಏಮ್ಸ್‌ಗೆ ₹12 ಕೋಟಿ ವಂಚನೆ!

ಪಿಟಿಐ
Published 30 ನವೆಂಬರ್ 2019, 6:08 IST
Last Updated 30 ನವೆಂಬರ್ 2019, 6:08 IST
   

ನವದೆಹಲಿ: ‘ದೇಶದ ಹೆಸರಾಂತ ವೈದ್ಯಕೀಯ ಸಂಸ್ಥೆ ಏಮ್ಸ್‌ಗೆತದ್ರೂಪಿ ಚೆಕ್‌’ಗಳನ್ನು ಬಳಸಿ ₹12 ಕೋಟಿ ವಂಚಿಸಿರುವುದು ಬೆಳಕಿಗೆ ಬಂದಿದೆ. ಎಸ್‌ಬಿಐನಲ್ಲಿರುವ ಏಮ್ಸ್‌ನ 2 ಖಾತೆಗಳಿಂದ ಹಣ ಪಡೆಯಲಾಗಿದೆ.

ನವದೆಹಲಿಯಿಂದ ಹೊರಗಿರುವ ಎಸ್‌ಬಿಐನ ಶಾಖೆಗಳಲ್ಲಿ ಈ ಚೆಕ್‌ಗಳನ್ನು ನೀಡಿ ಹಣ ಪಡೆಯಲಾಗಿದೆ. ವಂಚನೆ ಬೆಳಕಿಗೆ ಬಂದ ನಂತರವೂ ₹ 29 ಕೋಟಿ ತೆಗೆಯಲು ವಂಚಕರು ಯತ್ನಿಸಿ ವಿಫಲವಾಗಿದ್ದಾರೆ.

ತದ್ರೂಪಿ ಚೆಕ್‌ಗಳು ಮೂಲ ಚೆಕ್‌ಗಳನ್ನೇ ಹೋಲುತ್ತಿವೆ. ಚೆಕ್‌ಗಳ ತೀರುವಳಿಗೆ ಮೊದಲು ಬ್ಯಾಂಕ್‌ ಕೈಗೊಳ್ಳುವ ಯು.ವಿ ಕಿರಣ ಪರೀಕ್ಷೆಯನ್ನು ಅವು ಯಶಸ್ವಿಯಾಗಿ ಹಾದುಹೋಗಿದೆ ಎಂದು ತಿಳಿದುಬಂದಿದೆ.

ADVERTISEMENT

ಆಸ್ಪತ್ರೆಯ ಆಡಳಿತ ಈ ಕುರಿತು ದೆಹಲಿ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗಕ್ಕೆ ದೂರು ನೀಡಿದೆ. ಅಧಿಕೃತ ಸಹಿದಾರರ ಸಹಿಯನ್ನು ನಕಲಿ ಮಾಡಲಾಗಿದೆ ಎಂದು ತಿಳಿದುಬಂದಿದೆ. ತನ್ನದೇ ಬ್ಯಾಂಕ್‌ನ ಅನ್ಯ ಶಾಖೆಗಳ ಚೆಕ್‌ಗಳ ತೀರುವಳಿಗೂ ಮೊದಲು ಪಾಲಿಸಬೇಕಾದ ಶಿಷ್ಟಾಚಾರವನ್ನು ಬ್ಯಾಂಕ್‌ ಪಾಲಿಸಿಲ್ಲ ಎಂದು ಏಮ್ಸ್‌ ದೂರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.