ADVERTISEMENT

ದೇಶದಲ್ಲಿ ನಡೆಸಿದ ‘ಮಿದುಳು ಸ್ಟೆಂಟ್‌’ನ ಮೊದಲ ಕ್ಲಿನಿಕಲ್‌ ಟ್ರಯಲ್ ಯಶಸ್ವಿ

ಪಿಟಿಐ
Published 13 ಡಿಸೆಂಬರ್ 2025, 16:16 IST
Last Updated 13 ಡಿಸೆಂಬರ್ 2025, 16:16 IST
   

ನವದೆಹಲಿ: ತೀವ್ರ ಸ್ವರೂಪದ ಪಾರ್ಶ್ವವಾಯು ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಿರುವ ‘ಮಿದುಳು ಸ್ಟೆಂಟ್’ನ ಕ್ಲಿನಿಕಲ್‌ ಟ್ರಯಲ್‌ಅನ್ನು ಯಶಸ್ವಿಯಾಗಿ ನಡೆಸುವ ಮೂಲಕ ದೆಹಲಿಯ ಅಖಿಲ ಭಾರತ ವೈದ್ಯವಿಜ್ಞಾನಗಳ ಸಂಸ್ಥೆ (ಎಐಐಎಂಎಸ್‌) ವೈದ್ಯರು ಗಮನ ಸೆಳೆದಿದ್ದಾರೆ.

ಇದು, ದೇಶದಲ್ಲಿ ನಡೆಸಿದ ‘ಮಿದುಳು ಸ್ಟೆಂಟ್’ನ ಮೊದಲ ಕ್ಲಿನಿಕಲ್ ಟ್ರಯಲ್‌ ಆಗಿದೆ. ಈ ಸ್ಟೆಂಟ್‌ ಸುರಕ್ಷಿತ ಹಾಗೂ ಪಾರ್ಶ್ವವಾಯು ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎಂಬುದು ಟ್ರಯಲ್‌ನಿಂದ ದೃಢಪಟ್ಟಿದೆ ಎಂದು ಸಂಸ್ಥೆಯ ನ್ಯೂರೊ ಇಮೇಜಿಂಗ್‌ ವಿಭಾಗದ ಮುಖ್ಯಸ್ಥ ಡಾ.ಶೈಲೇಶ್ ಬಿ.ಗಾಯಕ್ವಾಡ್‌ ತಿಳಿಸಿದ್ದಾರೆ.

ಈ ಟ್ರಯಲ್‌ನ ಫಲಿತಾಂಶವು ‘ಜರ್ನಲ್‌ ಆಫ್‌ ನ್ಯೂರೊಇಂಟರ್‌ವೆನ್‌ಷನಲ್ ಸರ್ಜರಿ’ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. ‘ಸೂಪರ್‌ನೊವಾ ಸ್ಟೆಂಟ್‌’ ಎಂದು ಕರೆಯಲಾಗುವ ಇದನ್ನು ಗ್ರ್ಯಾವಿಟಿ ಮೆಡಿಕಲ್ ಟೆಕ್ನಾಲಜಿ ಅಭಿವೃದ್ಧಿಪಡಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.