ADVERTISEMENT

ಲೋಕಸಭೆ ಚುನಾವಣೆ | ಪ್ರಕಾಶ್‌ ಅಂಬೇಡ್ಕರ್‌ಗೆ ಬೆಂಬಲ ಸೂಚಿಸಿದ ಓವೈಸಿ

ಪಿಟಿಐ
Published 17 ಏಪ್ರಿಲ್ 2024, 3:22 IST
Last Updated 17 ಏಪ್ರಿಲ್ 2024, 3:22 IST
<div class="paragraphs"><p>ಅಸಾದುದ್ದೀನ್ ಓವೈಸಿ ಮತ್ತು ಪ್ರಕಾಶ್ ಅಂಬೇಡ್ಕರ್</p></div>

ಅಸಾದುದ್ದೀನ್ ಓವೈಸಿ ಮತ್ತು ಪ್ರಕಾಶ್ ಅಂಬೇಡ್ಕರ್

   

ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರದ ಅಕೋಲಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ವಂಚಿತ್ ಬಹುಜನ ಅಘಾಡಿ(ವಿಬಿಎ) ಪಕ್ಷದ ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್ ಅವರಿಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಬೆಂಬಲ ಘೋಷಿಸಿದ್ದಾರೆ.

2019ರ ಲೋಕಸಭೆ ಚುನಾವಣೆಯಲ್ಲಿ ಎಐಎಂಐಎಂ ಮತ್ತು ವಿಬಿಎ ಮೈತ್ರಿ ಮಾಡಿಕೊಂಡಿದ್ದವು. ನಂತರ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಮುರಿದುಬಿದ್ದಿತ್ತು.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಓವೈಸಿ, ‘ಈ ದೇಶಕ್ಕೆ ದಲಿತ ನಾಯಕತ್ವ ಅಗತ್ಯವಿದೆ ಎಂದು ನಮ್ಮ ಪಕ್ಷ ನಂಬಿದೆ. ಪ್ರಕಾಶ್ ಅಂಬೇಡ್ಕರ್ ಅವರಿಗೆ ಮತ ನೀಡುವಂತೆ ನಾನು ಅಕೋಲಾದ ಜನತೆಗೆ ಮನವಿ ಮಾಡುತ್ತೇನೆ’ ಎಂದರು.

ಈ ವೇಳೆ ಮರಾಠ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿರುವುದಾಗಿ ತಿಳಿಸಿದರು.

‘ತೆಳ್ಳಗಿನ ಮೈಕಟ್ಟಿನ ವ್ಯಕ್ತಿಯೊಬ್ಬ ಇಡೀ ಸರ್ಕಾರವನ್ನೇ ಅಲುಗಾಡಿಸಿದ್ದಾನೆ. ಜಾರಂಗೆ ಅವರು ಪಕ್ಷ ಕಟ್ಟುತ್ತಾರೆ ಎಂದು ನಾನು ನಿರೀಕ್ಷಿಸಿದ್ದೆ. ರಾಜಕೀಯ ಪಕ್ಷ ಕಟ್ಟಿ ಚುನಾವಣೆಯಲ್ಲಿ ಗೆದ್ದರೆ ಮಾತ್ರ ನ್ಯಾಯ ಸಿಗಲು ಸಾಧ್ಯ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.