ಏರ್ ಇಂಡಿಯಾ
ನವದೆಹಲಿ: ಬರ್ಮಿಂಗ್‌ಹ್ಯಾಂನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಬೆದರಿಕೆ ಕರೆ ಬಂದ ಕಾರಣ ವಿಮಾನವನ್ನು ಸೌದಿಯ ರಿಯಾದ್‌ನಲ್ಲಿ ತುರ್ತು ಭೂಸ್ಪರ್ಶ ಮಾಡಿದೆ.
‘ಜೂನ್ 21ರಂದು ಬರ್ಮಿಂಗ್‌ಹ್ಯಾಂನಿಂದ ದೆಹಲಿಗೆ ಬರುತ್ತಿದ್ದ AI114 ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ಕೂಡಲೇ ವಿಮಾನವನ್ನು ರಿಯಾದ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಭೂಸ್ಪರ್ಶ ಮಾಡಿಸಿ ಭದ್ರತಾ ತಪಾಸಣೆ ನಡೆಸಲಾಗಿದೆ. ಎಲ್ಲ ಪ್ರಯಾಣಿಕರನ್ನು ಬೇರೆ ಬೇರೆ ವಿಮಾನಗಳಲ್ಲಿ ಕಳುಹಿಸಿಕೊಡಲಾಗಿದೆ’ ಎಂದು ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆ ತಿಳಿಸಿದೆ.
ಜೂನ್ 12ರಂದು ಗುಜರಾತ್‌ನ ಅಹಮದಾಬಾದ್ ವಿಮಾನ ದುರಂತದ ಬಳಿಕ ಏರ್ ಇಂಡಿಯಾವು ಸುರಕ್ಷತಾ ತಪಾಸಣೆಗೆ ಒತ್ತು ನೀಡಿದೆ ಮತ್ತು ಸೇವೆಗಳನ್ನು ಕಡಿತಗೊಳಿಸಿದೆ.
‘ಮಧ್ಯಪ್ರಾಚ್ಯದಲ್ಲಿನ ವಾಯಮಾರ್ಗ ನಿರ್ಬಂಧ, ಯುರೋಪ್ ಮತ್ತು ಪೂರ್ವ ಏಷ್ಯಾದ ವಿಮಾನ ನಿಲ್ದಾಣಗಳಲ್ಲಿ ರಾತ್ರಿ ವೇಳೆಯ ನಿರ್ಬಂಧ, ವಾಯಸಂಚಾರ ದಟ್ಟಣೆ ಹಾಗೂ ಅನಿರೀಕ್ಷಿತ ಸಮಸ್ಯೆಗಳಿಂದಾಗಿ ಕೆಲವೊಮ್ಮೆ ವಿಮಾನಗಳು ವಿಳಂಬವಾಗುತ್ತಿವೆ’ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.