ಏರ್ ಇಂಡಿಯಾ
(ಚಿತ್ರ ಕೃಪೆ: ಏರ್ ಇಂಡಿಯಾ)
ನವದೆಹಲಿ: ದೆಹಲಿಯಿಂದ ಸಿಂಗಪುರಕ್ಕೆ ಬುಧವಾರ ರಾತ್ರಿ ಹೊರಟಿದ್ದ 200ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡ ಪರಿಣಾಮ, ಪ್ರಯಾಣಿಕರಿಗೆ ಬೇರೊಂದು ವಿಮಾನ ವ್ಯವಸ್ಥೆ ಮಾಡಲಾಗಿದೆ.
ಪರ್ಯಾಯ ವಿಮಾನವು ಆರು ಗಂಟೆ ತಡವಾಗಿ ಪ್ರಯಾಣ ಆರಂಭಿಸಿದೆ.
ಬೋಯಿಂಗ್ 787-9 ಡ್ರೀಮ್‌ಲೈನರ್‌ನ AI2380 ವಿಮಾನವು ಬುಧವಾರ ರಾತ್ರಿ 11 ಗಂಟೆಗೆ ಹಾರಲು ಸಿದ್ಧವಾಗಿತ್ತು. ಆದರೆ ವಿಮಾನದಲ್ಲಿ ಹವಾನಿಯಂತ್ರಣ ವ್ಯವಸ್ಥೆ ಮತ್ತು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾದ ಕಾರಣ ಎರಡು ಗಂಟೆಗಳ ಕಾಲ ವಿಮಾನದಲ್ಲೇ ಕುಳಿತಿದ್ದ ಪ್ರಯಾಣಿಕರನ್ನು ಕೆಳಕ್ಕೆ ಇಳಿಸಲಾಯಿತು ಎಂದು ವಿಮಾನದಲ್ಲಿದ್ದ ಪತ್ರಕರ್ತರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಏರ್ ಇಂಡಿಯಾ, ‘AI2380 ದೆಹಲಿ–ಸಿಂಗಪುರ ವಿಮಾನದಲ್ಲಿ ಎಸಿ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ವಿಮಾನವನ್ನು ಬದಲಿಸಲಾಗಿದೆ’ ಎಂದು ಹೇಳಿದೆ.
ಸುಮಾರು ಆರು ಗಂಟೆಗಳ ವಿಳಂಬದ ಬಳಿಕ ಗುರುವಾರ ಬೆಳಿಗ್ಗೆ 5.36ಕ್ಕೆ ವಿಮಾನವು ಸಿಂಗಪುರಕ್ಕೆ ಹೊರಟಿತು ಎಂದು ವರದಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.