ಏರ್ ಇಂಡಿಯಾ
ಮುಂಬೈ: ‘ಅಕ್ಟೋಬರ್ 4ರಂದು ಏರ್ ಇಂಡಿಯಾ 787 ಡ್ರೀಮ್‌ಲೈನರ್ ವಿಮಾನದಲ್ಲಿ ರ‍್ಯಾಮ್ ಏರ್‌ಟರ್ಬೈನ್ (ಆರ್‌ಎಟಿ) ಶನಿವಾರ ಅನೀರಿಕ್ಷಿತವಾಗಿ ತೆರೆದುಕೊಳ್ಳಲು ವ್ಯವಸ್ಥೆಯಲ್ಲಿನ ದೋಷವಾಗಲೀ ಅಥವಾ ಪೈಲಟ್ ಕಾರಣವಲ್ಲ’ ಎಂದು ಏರ್ ಇಂಡಿಯಾ ಸಂಸ್ಥೆಯು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ತೀರ್ಮಾನಕ್ಕೆ ಬರಲಾಗಿದೆ.
ಅಮೃತಸರದಿಂದ ಬರ್ಮಿಂಗ್‌ಹ್ಯಾಮ್‌ಗೆ ಹೊರಟಿದ್ದ ವಿಮಾನದಲ್ಲಿ ಸ್ವಯಂಚಾಲಿತವಾಗಿ ಆರ್‌ಎಟಿ ತೆರದುಕೊಂಡಿತ್ತು. ಬಳಿಕ ವಿಮಾನವು ಸುರಕ್ಷಿತವಾಗಿ ಭೂಸ್ಪರ್ಶ ಮಾಡಿತ್ತು. 500 ಅಡಿ ಎತ್ತರದಲ್ಲಿ ಘಟನೆ ನಡೆದಿದೆ ಎಂದು ಭಾರತೀಯ ಪೈಲಟ್‌ಗಳ ಫೆಡರೇಷನ್ ತಿಳಿಸಿತ್ತು.
‘ರ‍್ಯಾಮ್ ಏರ್‌ಟರ್ಬೈನ್ (ಆರ್‌ಎಟಿ) ಶನಿವಾರ ಅನೀರಿಕ್ಷಿತವಾಗಿ ತೆರೆದುಕೊಳ್ಳಲು ವ್ಯವಸ್ಥೆಯಲ್ಲಿನ ದೋಷವಲ್ಲ, ಪೈಲಟ್ ಕಾರಣವಲ್ಲ’ ಎಂದು ಏರ್ ಇಂಡಿಯಾ ಸಂಸ್ಥೆಯು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ತೀರ್ಮಾನಕ್ಕೆ ಬರಲಾಗಿದೆ. ಭೇರೆ ವಿಮಾನಯಾನ ಸಂಸ್ಥೆಗಳಲ್ಲಿಯೂ ಇಂತಹ ಘಟನೆಗಳು ನಡೆದಿರುವುದು ವರದಿಯಾಗಿದೆ’ ಎಂದು ಏರ್ ಇಂಡಿಯಾವು ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ವಿಮಾನದ ಎರಡು ಎಂಜಿನ್‌ಗಳ ವಿಫಲಗೊಂಡಾಗ ಸ್ವಯಂಚಾಲಿತವಾಗಿ ತೆರದುಕೊಳ್ಳುವ ಆರ್‌ಎಟಿ, ಗಾಳಿಯ ಸಹಾಯದಿಂದ ವಿದ್ಯುತ್ ಉತ್ಪಾದನೆಯನ್ನು ಮಾಡುತ್ತದೆ.
ಏರ್ ಇಂಡಿಯಾ 787 ಡ್ರೀಮ್‌ಲೈನರ್ ವಿಮಾನದಲ್ಲಿ ರ‍್ಯಾಮ್ ಏರ್‌ಟರ್ಬೈನ್ (ಆರ್‌ಎಟಿ) ಶನಿವಾರ ಅನೀರಿಕ್ಷಿತವಾಗಿ ತೆರೆದುಕೊಂಡಿರುವ ಬಗ್ಗೆ ಹೆಚ್ಚಿನ ಮಾಹಿತಿ ನೀಡುವಂತೆ ಭಾರತದ ವಿಮಾನಯಾನ ಸುರಕ್ಷತಾ ನಿಯಂತ್ರಣ ವಿಭಾಗವು ಬೋಯಿಂಗ್ ಕಂಪನಿಗೆ ಸೂಚನೆ ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.