ನವದೆಹಲಿ: ಪಶ್ಚಿಮ ಏಷ್ಯಾ ರಾಷ್ಟ್ರಗಳಿಗೆ ಇಂದಿನಿಂದ (ಮಂಗಳವಾರ) ಹಂತಹಂತವಾಗಿ ವಿಮಾನ ಹಾರಾಟವನ್ನು ಆರಂಭಿಸಲಾಗುವುದು ಎಂದು ಏರ್ ಇಂಡಿಯಾ ಹೇಳಿದೆ.
ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಉದ್ವಿಗ್ನತೆ ಹೆಚ್ಚಿದ ಕಾರಣ ವಿಮಾನ ಹಾರಾಟವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದ ಒಂದು ದಿನದ ನಂತರ ಈ ಪ್ರಕಟಣೆ ಹೊರಡಿಸಿದೆ. ಇಂದು ಮಸ್ಕತ್, ರಿಯಾದ್, ಜೆಡ್ಡಾ ಸೇರಿ ವಿವಿಧ ನಗರಗಳಿಗೆ ವಿಮಾನ ಸಂಚಾರ ಪ್ರಾರಂಭಿಸಿರುವುದಾಗಿ ಹೇಳಿದೆ.
ಟಾಟಾ ಗ್ರೂಪ್ ಒಡೆತನದ ವಿಮಾನಯಾನ ಸಂಸ್ಥೆ ಪಶ್ಚಿಮ ಏಷ್ಯಾದ 13 ನಗರಗಳಿಗೆ ವಿಮಾನ ಸಂಚಾರ ನಡೆಸುತ್ತಿತ್ತು. ವಾರಕ್ಕೆ ಒಟ್ಟು 900 ವಿಮಾನಗಳು ಕಾರ್ಯನಿರ್ವಹಿಸುತ್ತಿವೆ.
ಇಂದು, ದೆಹಲಿ– ಮಸ್ಕತ್, ಮುಂಬೈ– ಮಸ್ಕತ್, ಕೋಯಿಕ್ಕೋಡ್– ಮಸ್ಕತ್, ಕೋಯಿಕ್ಕೋಡ್– ರಿಯಾದ್ ಮತ್ತು ಜೈಪುರ– ಜೆಡ್ಡಾ ಮಾರ್ಗಗಳಲ್ಲಿ ವಿಮಾನ ಸಂಚರಿಸಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇದಲ್ಲದೆ ಯುಎಇಯ ಪ್ರಮುಖ ನಗರಗಳಾದ ದುಬೈ, ಅಬುಧಾಬಿ, ಶಾರ್ಜಾ, ಅಲ್ ಖ್ವಾಯಿನ್, ರಸ್ ಅಲ್ ಖೈಮಾಗಳಿಗೆ ಬುಧವಾರದಿಂದ ಏರ್ ಇಂಡಿಯಾ ವಿಮಾನ ಸಂಚರಿಸಲಿವೆ.
ಇರಾನ್ ವಾಯುಪ್ರದೇಶದಲ್ಲಿ ವಿಮಾನ ಹಾರಾಟವನ್ನು ನಿರ್ಬಂಧಿಸಲಾಗಿದ್ದು, ಕೆಲವು ವಿಮಾನಗಳು ಪರ್ಯಾಯ ಮಾರ್ಗವನ್ನು ಅನುಸರಿಸುತ್ತಿವೆ ಎಂದು ಪ್ರಕಟಣೆಯಲ್ಲಿ ತಿಳಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.