ADVERTISEMENT

ಏರ್‌ ಇಂಡಿಯಾದ 5 ಪೈಲೆಟ್‌ಗಳಿಗೆ ಸೋಂಕು ಧೃಢ

ಪಿಟಿಐ
Published 10 ಮೇ 2020, 20:30 IST
Last Updated 10 ಮೇ 2020, 20:30 IST
   

ಮುಂಬೈ: ಏರ್‌ ಇಂಡಿಯಾದ ಐವರು ಪೈಲೆಟ್ ಹಾಗೂ ಎಐಇಎಸ್‌ಎ (ಏರ್‌ ಇಂಡಿಯಾ ಎಂಜಿನಿಯರಿಂಗ್‌ ಸರ್ವಿಸ್‌ ಲಿಮಿಟೆಡ್)ನ ಇಬ್ಬರು ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಇರುವುದು ಧೃಢಪಟ್ಟಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

‘ದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಏರ್‌ ಇಂಡಿಯಾದ ಮೂಲಕ ವಾಪಾಸು ಕರೆತರಲಾಗುತ್ತಿದೆ. ಇದಕ್ಕೂ ಮುನ್ನ ಏರ್‌ಇಂಡಿಯಾ ಪೈಲೆಟ್‌ಗಳಿಗೆ ನಡೆಸಲಾದ ಪರೀಕ್ಷೆಯಲ್ಲಿ ಐವರಿಗೆ ಕೊರೊನಾ ಸೋಂಕು ತಗುಲಿರುವುದು ಧೃಢಪಟ್ಟಿದೆ. ಆದರೆ, ಪರೀಕ್ಷೆಗೆ ಉಪಯೋಗಿಸಿದ ಕಿಟ್ ದೋಷಪೂರಿತವಾಗಿರುವ ಸಾಧ್ಯತೆಯೂ ಇದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT