
ದೆಹಲಿ ಹೈಕೋರ್ಟ್
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯದ ಪ್ರಮಾಣ ಏರಿಕೆಯಾಗುತ್ತಿದ್ದು, ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಿ ಎಂದು ವಕೀಲರು ಹಾಗೂ ಪಕ್ಷಗಾರರಿಗೆ ದೆಹಲಿ ಹೈಕೋರ್ಟ್ ಸಲಹೆ ನೀಡಿದೆ.
ಭಾರಿ ಮಾಲಿನ್ಯದಿಂದಾಗಿ ದೆಹಲಿಯಾದ್ಯಂತ ದಟ್ಟ ಹೊಗೆ ಆವರಿಸಿದ್ದು, ವಾಯು ಗುಣಮಟ್ಟ ಸೂಚಂಕ್ಯ (ಎಕ್ಯುಐ) 498 ದಾಖಲಾಗಿದೆ. ಇದು ತೀವ್ರ ಪ್ರಮಾಣದ ಮಾಲಿನ್ಯದ ಸೂಚಕ.
‘ಸದ್ಯದ ಹವಾಮಾನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಸಾಧ್ಯವಾದರೆ ವಕೀಲರು / ಪಕ್ಷಗಾರರು, ಪಟ್ಟಿಯಾದ ಪ್ರಕರಣಗಳ ವಿಚಾರಣೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗುವ ವ್ಯವಸ್ಥೆಯನ್ನು ಬಳಸಿಕೊಳ್ಳಲು ನಿರ್ದೇಶಿಸಲಾಗಿದೆ’ ಎಂದು ಹೈಕೋರ್ಟ್‌ನ ರಿಜಿಸ್ಟ್ರಾರ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಇದೇ ರೀತಿಯ ನಿರ್ದೇಶನವನ್ನು ಭಾನುವಾರ ಭಾರತದ ಮುಖ್ಯನ್ಯಾಯಮೂರ್ತಿ ಸೂರ್ಯಕಾಂತ್ ಕೂಡ ನೀಡಿದ್ದರು.
ಸದ್ಯ ಹೈಕೋರ್ಟ್‌ನ ಕಲಾಪಗಳಲ್ಲಿ ವ್ಯಕ್ತಿಗತವಾಗಿ ಅಥವಾ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗುವ ಅವಕಾಶ ಇದೆ.
ವಾಯು ಮಾಲಿನ್ಯ ನಿಗಾ ವಹಿಸುವ 38 ಕೇಂದ್ರಗಳಲ್ಲಿ ಸೋಮವಾರ ‘ಭಾರಿ ಕಳಪೆ’ ಗುಣಮಟ್ಟ ದಾಖಲಾಗಿದೆ. ವಾಯುಮಾಲಿನ್ಯ ನಿಗಾ ವಹಿಸುವ 40 ಕೇಂದ್ರಗಳ ಪೈಕಿ ಜಹಾಂಗೀರ್‌ಪುರಿಯಲ್ಲಿ 498 ಎಕ್ಯುಐ ದಾಖಲಾಗಿದೆ.
ವಿಷಪೂರಿತ ಗಾಳಿ ಸೇವನೆಯಿಂದ ಸಾರ್ವಜನಿಕ ಆರೋಗ್ಯಕ್ಕೆ ಗಂಭೀರ ಹಾನಿ ಉಂಟಾಗಲಿದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.