ADVERTISEMENT

ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಮತ್ತಷ್ಟು ಕ್ಷೀಣ

ಪಿಟಿಐ
Published 5 ನವೆಂಬರ್ 2022, 12:57 IST
Last Updated 5 ನವೆಂಬರ್ 2022, 12:57 IST
ದೆಹಲಿಯಲ್ಲಿ ಶನಿವಾರ ಬೆಳಿಗ್ಗೆ ಆವರಿಸಿದ್ದ ದಟ್ಟ ಹೊಗೆಯಲ್ಲಿ ವಾಹನಗಳು ಸಂಚರಿಸಿದವು –ಪಿಟಿಐ ಚಿತ್ರ 
ದೆಹಲಿಯಲ್ಲಿ ಶನಿವಾರ ಬೆಳಿಗ್ಗೆ ಆವರಿಸಿದ್ದ ದಟ್ಟ ಹೊಗೆಯಲ್ಲಿ ವಾಹನಗಳು ಸಂಚರಿಸಿದವು –ಪಿಟಿಐ ಚಿತ್ರ    

ನವದೆಹಲಿ: ‘ದೆಹಲಿಯ ಆಗಸದಲ್ಲಿ ಶನಿವಾರವೂ ದಟ್ಟ ಹೊಗೆ ಆವರಿಸಿದ್ದು, ಗಾಳಿಯ ಗುಣಮಟ್ಟ ಮತ್ತಷ್ಟು ಹದಗೆಟ್ಟಿದೆ’ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ತಿಳಿಸಿದೆ.

‘ಕೆಲ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಕೊಂಚ ಸುಧಾರಿಸಿದೆ. ಆನಂದ ವಿಹಾರ್‌, ಮಥುರಾ ರಸ್ತೆ, ದಿಲ್ಸಾದ್‌ ಗಾರ್ಡನ್‌, ಐಟಿಒ, ಲೋಧಿ ರಸ್ತೆ, ಪಂಜಾಬಿ ಬಾಗ್‌ ಮತ್ತು ಪುಶಾ ಪ್ರದೇಶಗಳಲ್ಲಿಗಾಳಿಯ ಗುಣಮಟ್ಟ ಸೂಚ್ಯಂಕವು (ಎಕ್ಯೂಐ) 400ಕ್ಕಿಂತ ಕಡಿಮೆ ಇದೆ’ ಎಂದುಸಿಪಿಸಿಬಿ ಹೇಳಿದೆ.

‘ಅಲಿಪುರ (434), ಅಶೋಕ್‌ ವಿಹಾರ್‌ (425), ಬವಾನ (450), ಜಹಾಂಗೀರ್‌ಪುರಿ (444), ಮುಂಡಕಾ (434), ನರೇಲಾ (452), ನೆಹರೂ ನಗರ (422), ರೋಹಿಣಿ (437), ಸೋನಿಯಾ ವಿಹಾರ್‌ (446), ವಿವೇಕ್‌ ವಿಹಾರ್‌ (426) ಮತ್ತು ವಾಜೀರ್‌ಪುರ್ (432) ಪ್ರದೇಶಗಳಲ್ಲಿ ಗುಣಮಟ್ಟ ಬಿಗಡಾಯಿಸಿದೆ. ಇದರಿಂದ ಇಲ್ಲಿನ ನಿವಾಸಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಹೆಚ್ಚಿದೆ’ ಎಂದೂ ತಿಳಿಸಿದೆ.

ADVERTISEMENT

‘ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶನಿವಾರದಿಂದ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ’ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.