ADVERTISEMENT

ಏಪ್ರಿಲ್‌ 1ರಿಂದ ವಿಮಾನಯಾನ ಟಿಕೆಟ್‌ಗಳ ಬೆಲೆ ದುಬಾರಿ

ವಿಮಾನಯಾನ ಭದ್ರತಾ ಶುಲ್ಕಗಳನ್ನು ಹೆಚ್ಚಿಸಿದ ಡಿಜಿಸಿಎ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 8:37 IST
Last Updated 30 ಮಾರ್ಚ್ 2021, 8:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಳ, ಪ್ರಯಾಣಿಕರು ಮತ್ತು ಅವರ ಲಗೇಜ್‌ಗಳ ತಪಾಸಣೆ ಸೇರಿದಂತೆ ವಿವಿಧ ಭದ್ರತಾ ಸೇವೆಗಳಿಗೆ ನೀಡುವ ‘ವಿಮಾನಯಾನ ಭದ್ರತಾ ಶುಲ್ಕ(ಎಎಸ್‌ಎಫ್‌) ನಾಗರಿಕ ವಿಮಾನಯಾನ ನಿಯಂತ್ರಕರು ಹೆಚ್ಚಿಸಿರುವ ಹಿನ್ನೆಲೆಯಲ್ಲಿ, ಗುರುವಾರದಿಂದ (ಏಪ್ರಿಲ್ 1) ವಿಮಾನಯಾನದ ಟಿಕೆಟ್‌ಗಳು ದುಬಾರಿಯಾಗಲಿವೆ.

‘ದೇಶದೊಳಗೆ ಸಂಚರಿಸುವ ಪ್ರತಿ ಪ್ರಯಾಣಿಕರಿಗೆ ವಿಮಾನಯಾನ ಭದ್ರತಾ ಶುಲ್ಕ ₹200, ಅಂತರರಾಷ್ಟ್ರೀಯ ಪ್ರಯಾಣಿಕರಿಗೆ 12 ಅಮೆರಿಕನ್ ಡಾಲರ್ ಅಥವಾ ಅಷ್ಟೇ ಬೆಲೆಯ ಭಾರತೀಯ ರೂಪಾಯಿಯನ್ನು ನಿಗದಿಪಡಿಸಲಾಗಿದೆ. ಇದುವರೆಗೆ ₹ 160 ಮತ್ತು 5.20 ಡಾಲರ್‌ ಶುಲ್ಕ ಇತ್ತು‘ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ತಿಳಿಸಿದೆ.

ಹೊಸ ವಿಮಾನಯಾನ ಭದ್ರತಾ ಶುಲ್ಕ ಏಪ್ರಿಲ್ 1ರಿಂದ ಖರೀದಿಸುವ ಟಿಕೆಟ್‌ಗಳಿಗೆ ಅನ್ವಯವಾಗಲಿದೆ ಎಂದು ನಾಗರಿಕ ವಿಮಾನಯಾನ ನಿಯಂತ್ರಕರು ತಿಳಿಸಿದ್ದಾರೆ.

ADVERTISEMENT

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವಿಮಾನಯಾನ ಭದ್ರತಾ ಶುಲ್ಕವನ್ನು ಏರಿಕೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.