ADVERTISEMENT

ಮಹಾರಾಷ್ಟ್ರ: ಅಜಿತ್‌ ಪವಾರ್‌– ಐಪಿಎಸ್‌ ಅಧಿಕಾರಿ ನಡುವೆ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 3:24 IST
Last Updated 5 ಸೆಪ್ಟೆಂಬರ್ 2025, 3:24 IST
<div class="paragraphs"><p>ಅಜಿತ್‌ ಪವಾರ್‌</p></div>

ಅಜಿತ್‌ ಪವಾರ್‌

   

ಮುಂಬೈ: ಅಕ್ರಮವಾಗಿ ಮಣ್ಣು ತೆಗೆಯುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್‌ ಹಾಗೂ ಮಹಿಳಾ ಐಪಿಎಸ್‌ ಅಧಿಕಾರಿ ನಡುವೆ ವಾಗ್ವಾದ ನಡೆದಿದೆ.

ಫೋನ್‌ ಮೂಲಕ ನಡೆದ ಈ ವಾಗ್ವಾದದ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಸೋಲಾಪುರ ಜಿಲ್ಲೆಯ ಕುರ್ಡು ಗ್ರಾಮದಲ್ಲಿ ಈ ಘಟನೆ ನಡೆದಿದೆ.

ADVERTISEMENT

ಅಕ್ರಮವಾಗಿ ಮಣ್ಣು ತೆಗೆಯುತ್ತಿರುವ ಸ್ಥಳಕ್ಕೆ ಆಗಮಿಸಿದ್ದ ಐಪಿಎಸ್‌ ಅಧಿಕಾರಿಯೊಂದಿಗೆ ಫೋನ್‌ನಲ್ಲಿ ಮಾತನಾಡಿದ ಅಜಿತ್ ಪವಾರ್‌, ನಾನು ಉಪಮುಖ್ಯಮಂತ್ರಿಯಾಗಿದ್ದು, ತಕ್ಷಣ ಕಾರ್ಯಾಚರಣೆ ನಿಲ್ಲಿಸಿ ಅಲ್ಲಿಂದ ತೆರಳು ಎಂದು ಸೂಚನೆ ನೀಡುತ್ತಾರೆ. ಅವರು ಪವಾರ್‌ ಧ್ವನಿಯನ್ನು ಗುರುತಿಸದೆ, ‘ನನ್ನ ಮೊಬೈಲ್‌ಗೆ ಕರೆ ಮಾಡಿ’ ಎಂದು ಅಂಜನಾ ಕೃಷ್ಣ ಹೇಳುತ್ತಾರೆ.

ನಾನು ಹೇಳಿದರೂ ಕೇಳುತ್ತಿಲ್ಲವಲ್ಲ' ನಿನಗೆ ಎಷ್ಟು ಧೈರ್ಯ? ನಿನ್ನ ನಂಬರ್‌ ಕೊಡು, ವಿಡಿಯೊ ಕರೆ ಮಾಡುವೆ ಎಂದು ಹೇಳುತ್ತಾರೆ. ನಂತರ ವಿಡಿಯೊ ಕರೆ ಮಾಡಿ ಅಲ್ಲಿಂದ ತೆರಳುವಂತೆ ಅಜಿತ್ ಪವಾರ್‌ ಒತ್ತಾಯಿಸುತ್ತಾರೆ.

ಈ ವಿಡಿಯೊವನ್ನು ಉದ್ದೇಶಪೂರ್ವಕವಾಗಿ ಲೀಕ್ ಮಾಡಲಾಗಿದೆ. ಅಜಿತ್‌ ಪವಾರ್‌ ಅವರು ಅಧಿಕಾರಿಯ ಕಾರ್ಯಾಚರಣೆ ನಿಲ್ಲಿಸುವುದು ಅವರ ಉದ್ದೇಶವಾಗಿರಲಿಲ್ಲ, ಪಕ್ಷದ ಕಾರ್ಯಕರ್ತರನ್ನು ಸಮಾಧಾನಗೊಳಿಸಲು ಅಧಿಕಾರಿಗೆ ಕಠಿಣವಾಗಿ ಮಾತನಾಡಿರಬಹುದು ಎಂದು ಎನ್‌ಸಿಪಿ ಸಂಸದ ಸುನಿಲ್ ತಟ್ಕರೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.