ADVERTISEMENT

ನೂಪುರ್ ತಲೆ ತಂದರೆ ಮನೆ ಉಡುಗೊರೆ: ಅಜ್ಮೀರ್ ದರ್ಗಾ ಮೌಲ್ವಿ ವಿರುದ್ಧ ಎಫ್‌ಐಆರ್

ಪಿಟಿಐ
Published 5 ಜುಲೈ 2022, 12:48 IST
Last Updated 5 ಜುಲೈ 2022, 12:48 IST
ನೂಪುರ್ ಶರ್ಮಾ
ನೂಪುರ್ ಶರ್ಮಾ   

ಜೈಪುರ: ಪ್ರವಾದಿ ಮಹಮ್ಮದ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರ ತಲೆ ಕತ್ತರಿಸಿ ತಂದರೆ ಅವರಿಗೆ ತಮ್ಮ ಮನೆಯನ್ನು ಉಡುಗೊರೆಯಾಗಿ ನೀಡುವುದಾಗಿ ಅಜ್ಮೀರ್ ದರ್ಗಾದ ಮೌಲ್ವಿಯೊಬ್ಬರು ಕ್ಯಾಮೆರಾ ಮುಂದೆ ಹೇಳಿದ್ದು, ಪೊಲೀಸರು ಆತನ ಹುಡುಕಾಟದಲ್ಲಿ ತೊಡಗಿದ್ದಾರೆ.

ಈ ವಿಡಿಯೊಗೆ ಸಂಬಂಧಿಸಿದಂತೆ ದರ್ಗಾದ ಮೌಲ್ವಿ ಸಲ್ಮಾನ್ ಚಿಶ್ತಿ ವಿರುದ್ಧ ನೀಡಲಾಗಿರುವ ದೂರಿನ ಅನ್ವಯ ರಾಜಸ್ಥಾನ ಪೊಲೀಸರು ಸೋಮವಾರ ರಾತ್ರಿ ಎಫ್‌ಐಆರ್ ದಾಖಲಿಸಿದ್ದಾರೆ.

ಶರ್ಮಾ ಅವರ ತಲೆಯನ್ನು ತಂದು ಕೊಟ್ಟವರಿಗೆ ತನ್ನ ಮನೆಯನ್ನು ನೀಡುವುದಾಗಿ ಮೌಲ್ವಿಯು ವಿಡಿಯೊದಲ್ಲಿ ಹೇಳಿದ್ದಾನೆ. ಪ್ರವಾದಿ ಮಹಮ್ಮದ್‌ರನ್ನು ಅವಮಾನಿಸಿದ್ದಕ್ಕಾಗಿ ಆಕೆಯನ್ನು ನಾನು ಗುಂಡಿಟ್ಟು ಸಾಯಿಸಬೇಕಿತ್ತು ಎಂದು ಚಿಶ್ತಿ ವಿಡಿಯೊದಲ್ಲಿ ಚಡಪಡಿಸಿದ್ಧಾನೆ.

ADVERTISEMENT

‘ಎಲ್ಲ ಮುಸ್ಲಿಂ ದೇಶಗಳಿಗೆ ಪ್ರತಿಕ್ರಿಯೆ ನೀಡಬೇಕಿದೆ. ನಾನು ರಾಜಸ್ಥಾನದ ಅಜ್ಮೀರ್‌ನ ಹುಜೂರ್ ಖ್ವಾಜಾ ಬಾಬಾ ಕ ದರ್ಬಾರ್‌ನಿಂದ ಹೇಳುತ್ತಿದ್ದೇನೆ’ ಎಂದು ವಿಡಿಯೊದಲ್ಲಿ ಹೇಳಿದ್ದಾನೆ.

ಮೌಲ್ವಿಯನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಆರೋಪಿಯು ಅಪರಾಧ ಹಿನ್ನೆಲೆಯುಳ್ಳವನಾಗಿದ್ದಾನೆ’ಎಂದು ದರ್ಗಾ ವ್ಯಾಪ್ತಿಯ ಠಾಣಾಧಿಕಾರಿ ದಲ್ವೀರ್ ಸಿಂಗ್ ಫೌಜ್ದಾರ್ ಅವರು ಹೇಳಿದ್ದಾರೆ.

ಜುಲೈ 17ರಂದು ದರ್ಗಾದ ಮುಖ್ಯ ದ್ವಾರದಿಂದ ಪ್ರಚೋದನಕಾರಿ ಹೇಳಿಕೆ ನೀಡಿದ್ದ ನಾಲ್ವರನ್ನು ಇತ್ತೀಚೆಗೆ ಬಂಧಿಸಲಾಗಿದೆ.

ಇತ್ತೀಚೆಗೆ ಉದಯಪುರದಲ್ಲಿ ಟೇಲರ್ ಒಬ್ಬರನ್ನು ಕತ್ತು ಸೀಳಿ ಕೊಂದ ಘಟನೆ ಬಳಿಕ ರಾಜಸ್ಥಾನದಲ್ಲಿ ಉದ್ವಿಗ್ನ ಪರಿಸ್ಥಿತಿ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.