ADVERTISEMENT

ಘರ್ಜಿಸಲು ತಂದಿದ್ದರು, ಆದ್ರೆ ಚೀತಾ ಮಿಯಾಂವ್ ಅಂದಿತು: ಮೋದಿಗೆ ಅಖಿಲೇಶ್ ಟಾಂಗ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಸೆಪ್ಟೆಂಬರ್ 2022, 1:16 IST
Last Updated 19 ಸೆಪ್ಟೆಂಬರ್ 2022, 1:16 IST
ಚೀತಾ
ಚೀತಾ    

ಲಖನೌ: ನಮೀಬಿಯಾದಿಂದ ಎಂಟು ಚಿರತೆಗಳನ್ನು ತಂದು ಮಧ್ಯಪ್ರದೇಶದ ಕಾಡಿನಲ್ಲಿ ಬಿಟ್ಟಿದ್ದರ ಕುರಿತು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಕಾಲೆಳದಿದ್ದಾರೆ.

ಈ ಕುರಿತು ಭಾನುವಾರ ಟ್ವೀಟ್ ಮಾಡಿರುವ ಅವರು, ಚೀತಾಗಳನ್ನು ತಂದು ಅವುಗಳಿಂದ ಘರ್ಜನೆ ಮಾಡಿಸಲು ಮೋದಿ ಮುಂದಾಗಿದ್ದರು. ಈ ಮೂಲಕ ತಾವು ಪ್ರಚಾರ ಪಡೆದುಕೊಳ್ಳಲು ನೋಡುತ್ತಿದ್ದರು. ಆದರೆ, ನಮಿಬಿಯಾದಿಂದ ಬಂದ ಚೀತಾಗಳು ಮಿಯಾವ್ ಮಿಯಾವ್ ಎಂದು ಸುಮ್ಮನಾಗಿವೆ ಎಂದು ಕುಹಕವಾಡಿದ್ದಾರೆ.

ನಮೀಬಿಯಾದಿಂದ ಕರೆತಂದಿದ್ದ ಚೀತಾವೊಂದು ಬೋನಿನಲ್ಲಿ ಶಿಶ್ರಾಂತಿ ಪಡೆಯುವಾಗ ಬೆಕ್ಕಿನ ರೀತಿ ಮಿಯಾಂವ್ ಮಿಯಾಂವ್ ಎಂಬುದರ ವಿಡಿಯೊ ಹಂಚಿಕೊಂಡು ಅಖಿಲೇಶ್ ಈ ರೀತಿ ಟ್ವೀಟ್ ಮಾಡಿದ್ದಾರೆ.

ADVERTISEMENT

ಕಳೆದ ಮೂರ್ನಾಲ್ಕು ದಿನದಿಂದ ಚೀತಾಗಳ ವಿಷಯ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದ್ದು, ಸದ್ಯ ಚೀತಾಗಳು ದೂರದ ನಮೀಬಿಯಾದಿಂದ ಬಂದು ಭಾರತದ ಕಾಡು ಸೇರಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.