ADVERTISEMENT

ಬಿಜೆಪಿ ನಿತೀಶ್‌ ಕುಮಾರ್‌ರನ್ನು ಸಿಎಂ ಆಗಿ ಮುಂದುವರಿಯಲು ಬಿಡಲ್ಲ: ಅಖಿಲೇಶ್

ಪಿಟಿಐ
Published 30 ಅಕ್ಟೋಬರ್ 2025, 12:29 IST
Last Updated 30 ಅಕ್ಟೋಬರ್ 2025, 12:29 IST
<div class="paragraphs"><p>ಅಖಿಲೇಶ್ ಯಾದವ್</p></div>

ಅಖಿಲೇಶ್ ಯಾದವ್

   

- ಪಿಟಿಐ ಚಿತ್ರ

ಲಖನೌ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜಿಡಿಯು ನಾಯಕ ನಿತೀಶ್‌ ಕುಮಾರ್ ಅವರನ್ನು ಬಿಜೆಪಿ ದೋಣೆಯಂತೆ ಬಳಸಿಕೊಳ್ಳುತ್ತಿದೆ, ಚುನಾವಣೆ ಮುಗಿದ ಬಳಿಕ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಇರಲು ಬಿಡುವುದಿಲ್ಲ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್‌ ಹೇಳಿದ್ದಾರೆ.

ADVERTISEMENT

ಘಾಜಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಖಿಲೇಶ್, ನಿತೀಶ್ ಕುಮಾರ್ ನಿಜವಾಗಲೂ ಬಿಜೆಪಿಯ ‘ಚುನಾವಣೆಯ ವರ’ ಆದರೆ ಸಿಎಂ ಹುದ್ದೆಗೆ ಅವರು ವರ (ಮಧುಮಗ) ಅಲ್ಲ. ಬಿಹಾರದ ಜನರಿಗೆ ಎಲ್ಲ ಸತ್ಯವೂ ಗೊತ್ತು. ನಿತೀಶ್‌ ಕುಮಾರ್ ಕೇವಲ ಚುನಾವಣೆಗೆ ಸೀಮಿತ ಎನ್ನುವುದು ವಿಪಕ್ಷಗಳಿಗೂ ಗೊತ್ತು ಎಂದರು.

ಬಿಜೆಪಿ ಖಂಡಿತವಾಗಿಯೂ ನಿತೀಶ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡದು. ಇದನ್ನು ಯಾವ ಆಧಾರದಲ್ಲಿ ಹೇಳುತ್ತಿದ್ದೀರಿ ಎಂದು ನೀವು ಕೇಳಿದರೆ, ಮಹಾರಾಷ್ಟ್ರ ಮತ್ತು ಇತರ ರಾಜ್ಯಗಳಲ್ಲಿ ಆಗಿರುವುದನ್ನು ಗಮನಿಸಿ. ಚುನಾವಣೆಗೆ ಮುನ್ನ ಘೋಷಿಸಿದ ಮುಖ್ಯಮಂತ್ರಿ ಅಭ್ಯರ್ಥಿ ಮತ್ತು ಹುದ್ದೆಗೇರುವ ವ್ಯಕ್ತಿ ಬೇರೆಯೇ ಆಗಿರುತ್ತಾರೆ. ಅದೇ ಬಿಹಾರದಲ್ಲೂ ಆಗಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.