ADVERTISEMENT

ಮಹಾರಾಷ್ಟ್ರದಲ್ಲಿ 15ರಿಂದ ಮನೆ ಬಾಗಿಲಿಗೆ ಮದ್ಯ

ಪಿಟಿಐ
Published 13 ಮೇ 2020, 20:00 IST
Last Updated 13 ಮೇ 2020, 20:00 IST
ಮದ್ಯದ ಬಾಟಲಿಗಳನ್ನು ಕೊಂಡೊಯ್ಯುತ್ತಿರುವ ವ್ಯಕ್ತಿ
ಮದ್ಯದ ಬಾಟಲಿಗಳನ್ನು ಕೊಂಡೊಯ್ಯುತ್ತಿರುವ ವ್ಯಕ್ತಿ   

ಮುಂಬೈ: ಕೊರೊನಾ ವೈರಸ್‌ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿಮದ್ಯದಂಗಡಿಗಳ ಮುಂದೆ ದಟ್ಟಣೆ ತಪ್ಪಿಸುವ ಉದ್ದೇಶದಿಂದ ಮೇ 15ರಿಂದ ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡಲಾಗುವುದು ಎಂದು ಅಬಕಾರಿ ಇಲಾಖೆ ಬುಧವಾರ ತಿಳಿಸಿದೆ.

‘ಕಂಟೈನ್‌ಮೆಂಟ್‌ ವಲಯಕ್ಕೆ ಸೇರದ ಪ್ರದೇಶಗಳಲ್ಲಿ ಶುಕ್ರವಾರದಿಂದ ಮನೆ ಬಾಗಿಲಿಗೆ ಮದ್ಯ ಸರಬರಾಜು ಮಾಡಲಾಗುವುದು. ಮದ್ಯದಂಗಡಿ ಮಾಲೀಕರು ಮದ್ಯ ಸರಬರಾಜು ಮಾಡಲು 10ಕ್ಕಿಂತ ಹೆಚ್ಚು ಜನರನ್ನು ನಿಯೋಜಿಸಲು ಅವಕಾಶವಿಲ್ಲ ಹಾಗೂ ಸರಬರಾಜು ಮಾಡುವ ವ್ಯಕ್ತಿ ಏಕಕಾಲಕ್ಕೆ 24 ಬಾಟಲ್‌ಗಳಿಗಿಂತ ಅಧಿಕ ಮದ್ಯ ಕೊಂಡೊಯ್ಯುವಂತಿಲ್ಲ. ಎಂಆರ್‌ಪಿಗಿಂತ ಅಧಿಕ ದರವನ್ನು ಗ್ರಾಹಕರಿಗೆ ವಿಧಿಸುವಂತಿಲ್ಲ’ ಎಂದು ಸರ್ಕಾರಿ ಆದೇಶದಲ್ಲಿ ತಿಳಿಸಲಾಗಿದೆ.

ಆನ್‌ಲೈನ್‌ ಮೂಲಕ ಮದ್ಯ ಮಾರಾಟ ಖರೀದಿದಾರ ಹಾಗೂ ಮಾರಾಟಗಾರರ ನಡುವಿನ ಅಲಿಖಿತ ಗುತ್ತಿಗೆಯಾಗಿದ್ದು, ಯಾವುದೇ ವಿವಾದಕ್ಕೆ ರಾಜ್ಯ ಸರ್ಕಾರ ಹೊಣೆಯಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.