ಅಹಮದಾಬಾದ್: ಜೂನ್ 12ರಂದು ಲಂಡನ್‌ಗೆ ತೆರಳುತ್ತಿದ್ದ ವಿಮಾನವು ಅಹಮದಾಬಾದ್‌ನಲ್ಲಿ ದುರಂತಕ್ಕೀಡಾಗಿ ಮೃತಪಟ್ಟ 241 ಮಂದಿ ಪ್ರಯಾಣಿಕರ ಮೃತದೇಹಗಳ ಜೊತೆ ಕುಟುಂಬಸ್ಥರ ಡಿಎನ್‌ಎ ಹೋಲಿಕೆ ಮಾಡಿ ಗುರುತು ಪತ್ತೆ ಮಾಡುವ ಕಾರ್ಯ ಮುಗಿದಿದೆ. ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವ ಪ್ರಕ್ರಿಯೆಯೂ ಪೂರ್ಣಗೊಂಡಿತು.
ಸೋಮವಾರ ರಾತ್ರಿಯವರೆಗೂ 253 ಸಂತ್ರಸ್ತರ ಡಿಎನ್‌ಎಯನ್ನು ಅವರ ಕುಟುಂಬಸ್ಥರ ಜೊತೆಗೆ ಹೋಲಿಕೆ ಮಾಡಲಾಗಿದೆ. ಇದರಲ್ಲಿ 240 ಮಂದಿ ಮೃತದೇಹವು ಏರ್ ಇಂಡಿಯಾದ ವಿಮಾನದಲ್ಲಿವರು. ಬಿ.ಜೆ. ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಮೇಲೆ ವಿಮಾನ ಬಿದ್ದು ಮೃತಪಟ್ಟ 13 ಮಂದಿ ದೇಹದ ಜೊತೆಗೂ ಹೊಂದಾಣಿಕೆಯಾಗಿದೆ’ ಎಂದು ಇಲ್ಲಿನ ಸಿವಿಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಾಕೇಶ್ ಜೋಶಿ ತಿಳಿಸಿದರು.
ವಿಮಾನದಲ್ಲಿದ್ದ 242 ಪ್ರಯಾಣಿಕರ ಪೈಕಿ 241 ಮಂದಿ, ಕಟ್ಟಡದ ಮೇಲೆ ವಿಮಾನ ಬಿದ್ದಿದ್ದರಿಂದ ವೈದಕೀಯ ವಿದ್ಯಾರ್ಥಿಗಳು ಸೇರಿದಂತೆ 29 ಮಂದಿ ಮೃತಪಟ್ಟಿದ್ದರು. ಅಪಘಾತದ ಕೆಲವರ ಮೃತದೇಹಗಳು ಸುಟ್ಟು ಕರಕಲಾಗಿದ್ದರಿಂದ ಅವರ ಗುರುತು ಪತ್ತೆಹಚ್ಚಲು ಡಿಎನ್‌ಎ ಪರೀಕ್ಷೆ ನಡೆಸಲಾಗಿತ್ತು.
ಅಹಮದಾಬಾದ್‌ನ ವಿಧಿವಿಜ್ಞಾನ ಪ್ರಯೋಗಾಲಯದ ಕಾರ್ಯನಿರ್ವಹಿಸುತ್ತಿದ್ದ 20 ಮಹಿಳೆಯರು ಸೇರಿದಂತೆ 54 ಮಂದಿ ಡಿಎನ್‌ಎ ತಜ್ಞರು ಕಳೆದ 10 ದಿನಗಳಿಂದ ಅವಿರತ ಪರೀಕ್ಷೆ ನಡೆಸಿ, ಮೃತದೇಹಗಳ ಗುರುತು ಪತ್ತೆಹಚ್ಚಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.