ರಾಷ್ಟ್ರಧ್ವಜ
ರಾಯಪುರ: ಆಗಸ್ಟ್ 15ರ ಸ್ವಾತಂತ್ರ್ಯ ದಿನದಂದು ರಾಜ್ಯದ ಎಲ್ಲಾ ಮಸೀದಿಗಳು, ದರ್ಗಾಗಳು ಮತ್ತು ಮದರಸಾಗಳ ಮುಖ್ಯ ಪ್ರವೇಶದ್ವಾರದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಬೇಕು ಎಂದು ಛತ್ತೀಸಗಢ ರಾಜ್ಯ ವಕ್ಫ್ ಮಂಡಳಿ ನಿರ್ದೇಶನ ನೀಡಿದೆ.
ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಸಲೀಂ ರಾಜ್ ಅವರು, ‘ಈ ಸಂಬಂಧ ಎಲ್ಲ ಮುತವಲ್ಲಿಗಳಿಗೆ (ವಕ್ಫ್ ಆಸ್ತಿ ನಿರ್ವಹಣೆ ಹೊಣೆ ಹೊತ್ತವರು) ಸೋಮವಾರ ಪತ್ರ ಬರೆಯಲಾಗಿದೆ. ತ್ರಿವರ್ಣ ಧ್ವಜವು ಗೌರವ ಮತ್ತು ಹೆಮ್ಮೆಯ ಸಂಕೇತ. ಅದು ಯಾವುದೇ ಒಂದು ಧರ್ಮಕ್ಕೆ ಸಂಬಂಧಿಸಿದ್ದಲ್ಲ’ ಎಂದು ಹೇಳಿದರು.
ಇಮಾಮ್, ಮುತವಲ್ಲಿ ಅಥವಾ ಮಸೀದಿ ಸಮಿತಿ ಸದಸ್ಯರ ಉಪಸ್ಥಿತಿಯಲ್ಲಿ ಧ್ವಜಾರೋಹಣ ನೆರವೇರಿಸಬೇಕು. ತ್ರಿವರ್ಣ ಧ್ವಜ ಮತ್ತು ದೇಶದ ಮೇಲೆ ಪ್ರೀತಿ ಇಲ್ಲದವರಿಗೆ ಭಾರತ ಮಾತೆಯ ಈ ಭೂಮಿಯ ಮೇಲೆ ಬದುಕುವ ಹಕ್ಕಿಲ್ಲ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.