ADVERTISEMENT

ಪೋಕ್ಸೊ ಪ್ರಕರಣ: ಸ್ವಾಮೀಜಿ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಕೋರ್ಟ್‌

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 16:18 IST
Last Updated 27 ಫೆಬ್ರುವರಿ 2026, 16:18 IST
ಅವಿ ಮುಕ್ತೇಶ್ವರಾನಂದ ಸರತ್ವತಿ 
ಅವಿ ಮುಕ್ತೇಶ್ವರಾನಂದ ಸರತ್ವತಿ    

ಪ್ರಯಾಗ್‌ರಾಜ್‌ (ಪಿಟಿಐ): ಪೋಕ್ಸೊ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಉತ್ತರಾಖಂಡದ ಜೋಶಿ ಮಠದ ಅವಿ ಮುಕ್ತೇಶ್ವರಾನಂದ ಸರತ್ವತಿ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿಯ ಆದೇಶವನ್ನು ಕಾಯ್ದಿರಿಸಿರುವ ಅಲಹಾಬಾದ್‌ ಹೈಕೋರ್ಟ್‌, ಅವರ ಬಂಧನಕ್ಕೆ ತಡೆ ನೀಡಿದೆ. 

ನ್ಯಾಯಮೂರ್ತಿ ಜಿತೇಂದ್ರ ಕುಮಾರ್‌ ಸಿನ್ಹಾ ನೇತೃತ್ವದ ನ್ಯಾಯಪೀಠವು ಆದೇಶ ನೀಡಿದ್ದು, ’ಅರ್ಜಿದಾರ ಅಶುತೋಷ್‌ ಪಾಂಡೆ ಮತ್ತು ರಾಜ್ಯ ಸರ್ಕಾರಕ್ಕೆ ಪ್ರತಿಕ್ರಿಯೆ ದಾಖಲಿಸುವಂತೆ ಸೂಚಿಸಿದೆ. 

ಕಳೆದ ವರ್ಷ ಕುಂಭಮೇಳದ ವೇಳೆ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಸ್ವಾಮಿ ಅವಿ ಮುಕ್ತೇಶ್ವರಾನಂದ ಮತ್ತು ಅವರ ಶಿಷ್ಯ ಮುಕುಂದಾನಂದ ಬ್ರಹ್ಮಚಾರಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿದೆ. 

ADVERTISEMENT

ನಿರೀಕ್ಷಣಾ ಜಾಮೀನು ಅರ್ಜಿಗೆ ಸಬಂಧಿಸಿದ ಆದೇಶವನ್ನು ಮಾರ್ಚ್ ಮೂರನೆಯ ವಾರದಲ್ಲಿ ಹೊರಡಿಸುವುದಾಗಿ ಹೇಳಿರುವ ಕೋರ್ಟ್‌, ಪೊಲೀಸರ ತನಿಖೆಗೆ ಸಹಕರಿಸುವಂತೆ ಅವಿ ಮುಕ್ತೇಶ್ವರಾನಂದ ಅವರಿಗೆ ಸೂಚಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.