ADVERTISEMENT

ಎಂಜಿನ್‌ ರಕ್ಷಾಕವಚ ಇಲ್ಲದೇ ಅಲೈಯನ್ಸ್‌ ಏರ್‌ ವಿಮಾನ ಹಾರಾಟ: ತನಿಖೆಗೆ ಆದೇಶ

ಮುಂಬೈನಿಂದ ಭುಜ್‌ಗೆ ಪ್ರಯಾಣ

ಪಿಟಿಐ
Published 9 ಫೆಬ್ರುವರಿ 2022, 12:31 IST
Last Updated 9 ಫೆಬ್ರುವರಿ 2022, 12:31 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಮುಂಬೈನಿಂದ ಗುಜರಾತ್‌ನ ಭುಜ್‌ಗೆ ಸಂಚರಿಸಿದ, ಅಲೈಯನ್ಸ್‌ ಏರ್‌ನ ವಿಮಾನವೊಂದು ಎಂಜಿನ್‌ನ ರಕ್ಷಾಕವಚ ಇಲ್ಲದೇ ಹಾರಾಟ ನಡೆಸಿದ ಘಟನೆ ಬುಧವಾರ ನಡೆದಿದೆ.

ಈ ಘಟನೆ ಕುರಿತು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶಕರು (ಡಿಜಿಸಿಎ) ತನಿಖೆಗೆ ಆದೇಶಿಸಿದ್ದಾರೆ. 70 ಪ್ರಯಾಣಿಕರಿದ್ದ ಈ ವಿಮಾನ ಭುಜ್‌ ವಿಮಾನ ನಿಲ್ಧಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ ಎಂದು ಮೂಲಗಳು ತಿಳಿಸಿವೆ.

ಎಂಜಿನ್‌ಗೆ ರಕ್ಷಾಕವಚವನ್ನು ಹೊದಿಸದೇ ವಿಮಾನ ಟೇಕಾಫ್‌ ಆಗಿರುವ ವಿಷಯ ತಿಳಿದ ನಂತರ, ರನ್‌ವೇಯಲ್ಲಿ ಬಿದ್ದಿದ್ದ ರಕ್ಷಾಕವಚವನ್ನು ಹುಡುಕಿ ತರಲಾಯಿತು ಎಂದು ಮೂಲಗಳು ಹೇಳಿವೆ.

ADVERTISEMENT

‘ಬುಧವಾರ ಬೆಳಿಗ್ಗೆ ಈ ಘಟನೆ ನಡೆದಿದೆ. ಮುಂಬೈ–ಭುಜ್ ವಿಮಾನದ (91–625) ಎಡಭಾಗದ ಎಂಜಿನ್‌ ಕವಚ ಇಲ್ಲದೇ ಟೇಕಾಫ್‌ ಆಗಿರುವುದು ಗಮನಕ್ಕೆ ಬಂದಿತು. ತಕ್ಷಣವೇ ಏರ್‌ ಟ್ರಾಫಿಕ್‌ ಕಂಟ್ರೋಲರ್‌ (ಎಟಿಸಿ) ಅವರು ವಿಮಾನನಿಲ್ದಾಣ ಅಧಿಕಾರಿಗಳಿಗೆ ಮಾಹಿತಿ ನೀಡಿದರು’ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.