ADVERTISEMENT

ಅಲರ್ಜಿ, ಜ್ವರಕ್ಕಾಗಿ ಮಕ್ಕಳಿಗೆ ನೀಡುವ ಆಲ್ಮಂಟ್ ಸಿರಪ್ ಬಳಕೆ ನಿಲ್ಲಿಸಲು ಸಲಹೆ!

ಪಿಟಿಐ
Published 10 ಜನವರಿ 2026, 16:07 IST
Last Updated 10 ಜನವರಿ 2026, 16:07 IST
   

ಹೈದರಾಬಾದ್: ಅಲರ್ಜಿ, ಜ್ವರ ಮತ್ತು ಆಸ್ತಮಾ ಚಿಕಿತ್ಸೆಗಾಗಿ ಮಕ್ಕಳಿಗೆ ಸಾಮಾನ್ಯವಾಗಿ ನೀಡುವ ಆಲ್ಮಂಟ್-ಕಿಡ್ ಸಿರಪ್ ಬಳಕೆಯನ್ನು ತಕ್ಷಣವೇ ನಿಲ್ಲಿಸುವಂತೆ ತೆಲಂಗಾಣ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಎ) ಶನಿವಾರ ತುರ್ತು ಸಲಹೆ ನೀಡಿದೆ. 

ಸಿರಪ್‌ನಲ್ಲಿ ವಿಷಕಾರಿ ದ್ರಾವಣ ಡೈಎಥಿಲೀನ್ ಗ್ಲೈಕಾಲ್‌ (ಡಿಇಜಿ) ಪ್ರಮಾಣ ಹೆಚ್ಚು ಇರುವುದು ಪರೀಕ್ಷೆಯಿಂದ ಕಂಡುಬಂದಿರುವ ಕಾರಣ ಈ ನಿರ್ಧಾರ ತೆಗೆದುಕೊಂಡಿದೆ.

‘ಆಲ್ಮಂಟ್-ಕಿಡ್ ಸಿರಪ್ ಕಳಪೆ ಗುಣಮಟ್ಟ ಹೊಂದಿರುವುದು ಪರೀಕ್ಷೆಯಿಂದ ತಿಳಿದುಬಂದಿರುವುದಾಗಿ ಕೋಲ್ಕತ್ತದ ಪೂರ್ವ ವಲಯದ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು ( ಸಿಡಿಎಸ್‌ಸಿಒ) ಎಚ್ಚರಿಕೆ ನೀಡಿದೆ. ಆದ್ದರಿಂದ ಸಾರ್ವಜನಿಕರು ಈ ಸಿರಪ್‌ ಬಳಕೆಯನ್ನು ತಕ್ಷಣವೇ ನಿಲ್ಲಿಸುವಂತೆ ಸೂಚಿಸಲಾಗಿದೆ’ ಎಂದು ಡಿಸಿಎ ಹೇಳಿದೆ.

ADVERTISEMENT

ಎಲ್ಲಾ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳು, ವಿತರಕರು ಮತ್ತು ಆಸ್ಪತ್ರೆಗಳು ಈ ಸಿರಪ್‌ ವಿತರಿಸದಂತೆ ಮತ್ತು ಮಾರಾಟ ಮಾಡದಂತೆ ನೋಡಿಕೊಳ್ಳಲು ರಾಜ್ಯದ ಎಲ್ಲ ಡ್ರಗ್ಸ್‌ ಇನ್ಸ್‌ಪೆಕ್ಟರ್‌ಗಳು ಮತ್ತು ಸಹಾಯಕ ನಿರ್ದೇಶಕರಿಗೆ ಡಿಸಿಎ ಸೂಚಿಸಿದೆ.