ADVERTISEMENT

Amarnath Yatra: ವಿವೇಕಾನಂದರ ಪ್ರೇರಣೆಯಿಂದ ಅಮರನಾಥ ಯಾತ್ರೆ ಕೈಗೊಂಡ ಅಮೆರಿಕನ್ನರು

​ಪ್ರಜಾವಾಣಿ ವಾರ್ತೆ
Published 12 ಜುಲೈ 2023, 15:44 IST
Last Updated 12 ಜುಲೈ 2023, 15:44 IST
ಸ್ವಾಮಿ ವಿವೇಕಾನಂದ
ಸ್ವಾಮಿ ವಿವೇಕಾನಂದ   

ಶ್ರೀನಗರ: ಕ್ಯಾಲಿಫೋರ್ನಿಯಾದ ಇಬ್ಬರು ಅಮೆರಿಕನ್ನರು ಅಮರನಾಥ ಯಾತ್ರ ಪೂರ್ಣಗೊಳಿಸಿದ್ದು, ಈ ಮೂಲಕ ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿರುವ ಶಿವನ ದೇಗುಲಕ್ಕೆ ಯಾತ್ರೆ ಕೈಗೊಂಡ ಮೊದಲ ವಿದೇಶಿ ಯಾತ್ರಿಕರು ಎನಿಸಿಕೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಆಡಳಿತದ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಇಬ್ಬರೂ ಅಮೆರಿಕನ್ನರು ಯಾತ್ರೆಯ ಅನುಭವ ಹಂಚಿಕೊಂಡಿದ್ದಾರೆ. ಆದರೆ, ಇಬ್ಬರ ಹೆಸರು ಬಹಿರಂಗಪಡಿಸಿಲ್ಲ.

‘ನಾವು ಸ್ವಾಮಿ ವಿವೇಕಾನಂದರ ಭಕ್ತರು. ವಿವೇಕಾನಂದರು ಅಮರನಾಥಕ್ಕೆ ಆಗಮಿಸಿ ವಿಶೇಷ ಅನುಭೂತಿ ಹೊಂದಿದ್ದರು. ಶಿವನ ದರ್ಶನ ಪಡೆದಿದ್ದರು. 40 ವರ್ಷಗಳಿಂದ ಈ ಕಥೆ ನನಗೆ ತಿಳಿದಿದೆ. ಅದ್ದಕಾಗಿಯೇ ನಾವು ಇಲ್ಲಿಗೆ ಬರಲು ಬಯಸಿದೆವು. ಯಾತ್ರೆ ಅಸಾಧ್ಯವೇನೋ ಎಂದು ಅನಿಸಿತ್ತಾದರೂ ಭೋಲೆನಾಥನ ಕೃಪೆಯಿಂದ ನಾವು ದರ್ಶನ ಪಡೆದಿದ್ದೇವೆ‘ ಎಂದು ತಿಳಿಸಿದ್ದಾರೆ.

ADVERTISEMENT

ಈ ಪರ್ವತಗಳಲ್ಲಿ ವಿಶೇಷ ಶಾಂತಿ ನೆಲೆಸಿದೆ. ಅದು ನಮ್ಮ ಅನುಭವಕ್ಕೆ ಬಂದಿದೆ ಎಂದು ಅವರು ಹೇಳಿದರು.

‌3,888 ಮೀಟರ್ ಎತ್ತರದಲ್ಲಿರುವ ಪವಿತ್ರ ದೇಗುಲಕ್ಕೆ ಭೇಟಿ ನೀಡುವ ಭಕ್ತರಿಗೆ ಅಮರನಾಥ ದೇಗುಲ ಮಂಡಳಿಯು ಮಾಡಿರುವ ವ್ಯವಸ್ಥೆಗಳ ಬಗ್ಗೆ ಇಬ್ಬರು ಅಮೆರಿಕನ್ನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.