ಕಾಶ್ಮೀರದ ಅನಂತನಾಗ್ ಜಿಲ್ಲೆಯ ಮೂಲಕ ಅಮರನಾಥ ಯಾತ್ರೆ ಕೈಗೊಂಡ ಯಾತ್ರಿಕರು
ಪಿಟಿಐ ಚಿತ್ರ
ಜಮ್ಮು: ಭಗವತಿ ಬೇಸ್ ಕ್ಯಾಂಪ್‌ನಿಂದ 1,499 ಮಹಿಳೆಯರು ಹಾಗೂ 441 ಮಕ್ಕಳು ಸೇರಿ ಒಟ್ಟು 5,365 ಯಾತ್ರಿಕರು ದಕ್ಷಿಣ ಕಾಶ್ಮೀರ ಹಿಮಾಲಯದೆಡೆಗೆ ಅಮರನಾಥ ಯಾತ್ರೆಯನ್ನು ಶನಿವಾರ ಆರಂಭಿಸಿದರು.
ಈ ತಂಡದಲ್ಲಿ 135 ಸಾಧುಗಳಿದ್ದಾರೆ. ಯಾತ್ರಿಕರು ಅನಂತನಾಗ್ ಜಿಲ್ಲೆಯ ನುನ್ವಾನ್–ಪಹಲ್ಗಾಮ್ ಮತ್ತು ಗಂದೇರ್ಬಾಲ್‌ನ ಬಲ್ತಾಲ್ ಕಡೆಗೆ ಎರಡು ತಂಡಗಳಾಗಿ ಸಾಗಿದರು. ರಕ್ಷಣೆಗೆ ಭಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಪಹಲ್ಗಾಮ್ ಮೂಲಕ 3,514 ಯಾತ್ರಿಕರು 119 ವಾಹನಗಳಲ್ಲಿ ಸಾಗಿದರು. ಬಲ್ತಾಲ್ ಮಾರ್ಗದಲ್ಲಿ 2,851 ಯಾತ್ರಿಕರು 92 ವಾಹನಗಳಲ್ಲಿ ಸಾಗಿದರು.
38 ದಿನಗಳ ಅಮರನಾಥ ಯಾತ್ರೆಯಲ್ಲಿ ಯಾತ್ರಿಕರು 3,880 ಮೀಟರ್ ಎತ್ತರದ ಗುಹಾದೇವಾಲಯಕ್ಕೆ ಭೇಟಿ ನೀಡಿ ಹಿಮಲಿಂಗದ ದರ್ಶನ ಮಾಡಲಿದ್ದಾರೆ. ಜುಲೈ 3ರಿಂದ ಆರಂಭವಾದ ಈ ಯಾತ್ರೆಯು ಆ. 9ರವರೆಗೂ ನಡೆಯಲಿದೆ. ರಕ್ಷಾ ಬಂಧನದ ದಿನ ಕೊನೆಗೊಳ್ಳಲಿದೆ.
ಈವರೆಗೂ 2.75 ಲಕ್ಷ ಯಾತ್ರಿಕರು ಇಲ್ಲಿಗೆ ಭೇಟಿ ನೀಡಿ ಹಿಮಲಿಂಗದ ದರ್ಶನ ಪಡೆದಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.