ADVERTISEMENT

Amarnath Yatra | ಜಮ್ಮು–ಕಾಶ್ಮೀರ: ಅಮರನಾಥ ಯಾತ್ರಿಗಳ ಸಾವಿನ ಸಂಖ್ಯೆ 19ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2023, 15:37 IST
Last Updated 12 ಜುಲೈ 2023, 15:37 IST
ಅಮರನಾಥ ಯಾತ್ರೆ
ಅಮರನಾಥ ಯಾತ್ರೆ   

ಶ್ರೀನಗರ: ಬುಧವಾರ ಕಳೆದ 24 ಗಂಟೆಗಳ ಅವಧಿಯಲ್ಲಿ ಐವರು ಅಮರನಾಥ ಯಾತ್ರಿಗಳು ಸಾವಿಗೀಡಾಗಿದ್ದು, ಯಾತ್ರೆಯಲ್ಲಿ ಸಾವಿಗೀಡಾದವರ ಸಂಖ್ಯೆ 19ಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಪಹಲ್‌ಗಾಮ್‌ನಲ್ಲಿ ಮೂವರು ಸಾವಿಗೀಡಾಗಿದರೆ, ಇನ್ನಿಬ್ಬರು ಬಲ್‌ತಾಲ್ ಮಾರ್ಗದಲ್ಲಿ ಸಾವಿಗೀಡಾಗಿದ್ದಾರೆ. ಐದು ಮಂದಿಯೂ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಮೃತರಲ್ಲಿ ಒಬ್ಬರು ಉತ್ತರಪ್ರದೇಶದವರಾದರೆ, ಮತ್ತೊಬ್ಬರು ಮಧ್ಯಪ್ರದೇಶದವರು. ಇನ್ನುಳಿದ ಯಾತ್ರಿಗಳ ಗುರುತು ಇನ್ನೂ ತಿಳಿದುಬಂದಿಲ್ಲ. 

ADVERTISEMENT

ಮಂಗಳವಾರದ ತನಕ 1,37,353 ಯಾತ್ರಿಗಳು ಅಮರನಾಥಕ್ಕೆ ಭೇಟಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.