ADVERTISEMENT

Amarnath Yatra: ಅಮರನಾಥ ಯಾತ್ರೆ ಆರಂಭಿಸಿದ 7,200ಕ್ಕೂ ಹೆಚ್ಚು ಯಾತ್ರಿಕರು

​ಪ್ರಜಾವಾಣಿ ವಾರ್ತೆ
Published 6 ಜುಲೈ 2025, 7:37 IST
Last Updated 6 ಜುಲೈ 2025, 7:37 IST
<div class="paragraphs"><p>Amarnath Yatra</p></div>

Amarnath Yatra

   

ಜಮ್ಮು: ನಿರಂತರ ಮಳೆಯ ನಡುವೆಯೂ 7,200ಕ್ಕೂ ಹೆಚ್ಚು ಯಾತ್ರಾರ್ಥಿಗಳ ಹೊಸ ತಂಡ ಭಾನುವಾರ ಅಮರನಾಥ ಯಾತ್ರೆಯನ್ನು ಪ್ರಾರಂಭಿಸಿತು.

ಮುಂಜಾನೆ ಇಲ್ಲಿನ ಮೂಲ ಶಿಬಿರದಿಂದ ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಅಮರನಾಥ ದೇಗುಲಕ್ಕೆ ಹೊರಟಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಇದು ಈ ವರ್ಷ ಯಾತ್ರೆ ಕೈಗೊಂಡ ಐದನೇ ತಂಡವಾಗಿದ್ದು, ಒಟ್ಟು 7,200ಕ್ಕೂ ಹೆಚ್ಚು ಯಾತ್ರಿಕರು ಬೆಳಗಿನ ಜಾವ 3.15 ರಿಂದ 4.30 ಗಂಟೆಗೆ ಜಮ್ಮುವಿನ ಭಗವತಿ ನಗರದ ಬೇಸ್‌ ಕ್ಯಾಂಪ್‌ನಿಂದ ವಾಹನಗಳಲ್ಲಿ ಹೊರಟರು. ಯಾತ್ರಾರ್ಥಿಗಳಿಗೆ ಭದ್ರತೆ ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈ 3ರಂದು ಯಾತ್ರೆ ಪ್ರಾರಂಭವಾಗಿದ್ದು ಭಾನುವಾರದವರೆಗೂ ಸುಮಾರು 50 ಸಾವಿರಕ್ಕೂ ಹೆಚ್ಚು ಭಕ್ತರ ಅಮರನಾಥನ ದರ್ಶನ ಪಡೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

1,587 ಮಹಿಳೆಯರು ಮತ್ತು 30 ಮಕ್ಕಳನ್ನು ಒಳಗೊಂಡ 7,208 ಯಾತ್ರಾರ್ಥಿಗಳ ಭಾನುವಾರ ತೆರಳಿದ ತಂಡದಲ್ಲಿದ್ದಾರೆ. 

ಜುಲೈ 3ರಂದು ಪ್ರಾರಂಭವಾಗಿರುವ 38 ದಿನಗಳ ಯಾತ್ರೆಯು ಆಗಸ್ಟ್‌ 9ಕ್ಕೆ ಮುಕ್ತಾಯಗೊಳ್ಳಲಿದೆ. ಈವರೆಗೆ 50 ಸಾವಿರ ಭಕ್ತರು ಯಾತ್ರೆ ಕೈಗೊಂಡಿದ್ದಾರೆ. ಈವರೆಗೆ 3.5 ಲಕ್ಷ ಯಾತ್ರಾರ್ಥಿಗಳು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ.

ಏ.22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವಿಗೀಡಾದ ಘಟನೆಯು ಜನರಲ್ಲಿ ಆತಂಕ ಮೂಡಿಸಿತ್ತು. ಇದೀಗ ಯಾತ್ರೆಯು ಸುಗಮವಾಗಿ ಸಾಗುತ್ತಿದೆ. ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.