ADVERTISEMENT

ಅಮರನಾಥ ಯಾತ್ರೆಗೆ ತೆರಳಿದ 6,064 ಯಾತ್ರಿಕರ ತಂಡ

ಪಿಟಿಐ
Published 16 ಜುಲೈ 2025, 9:36 IST
Last Updated 16 ಜುಲೈ 2025, 9:36 IST
   

ಜಮ್ಮು: ಹಿಮಾಲಯದ ತಪ್ಪಲಿನಲ್ಲಿರುವ ಅಮರನಾಥನ ದರ್ಶನ ಪಡೆಯಲು 6,064 ಯಾತ್ರಿಕರ ತಂಡವೊಂದು ಬುಧವಾರ ತೆರಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜುಲೈ 3ರಿಂದ ಈ ಬಾರಿಯ ಅಮರನಾಥ ಯಾತ್ರೆ ಆರಂಭವಾಗಿದೆ.

ಅನಂತನಾಗ್‌ನ ನುನ್ವಾನ್-ಪಹಲ್ಗಾಮ್ ಹಾಗೂ ಗಂದರ್ಬಲ್ ಬಳಿಯ ಬಾಲ್ಟಾಲ್ ಬೇಸ್‌ ಕ್ಯಾಂಪ್‌ ಮೂಲಕ ಎರಡು ಬೇರೆ ಬೇರೆ ಯಾತ್ರಿಕರ ತಂಡ ತೆರಳಿದ್ದು, ಅದರಲ್ಲಿ 1,511 ಮಹಿಳೆಯರಿದ್ದಾರೆ. ಭಯೋತ್ಪಾದಕರ ಬೆದರಿಕೆಯಿರುವ ಕಾರಣ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ.

ADVERTISEMENT

ಪಹಲ್ಗಾಮ್‌ನಿಂದ 139 ವಾಹನಗಳಲ್ಲಿ 3,593 ಯಾತ್ರಿಕರು ತೆರಳಿದ್ದಾರೆ. ಬಾಲ್ಟಾಲ್ ಬೇಸ್‌ ಕ್ಯಾಂಪ್‌ನಿಂದ 95 ವಾಹನಗಳಲ್ಲಿ 2,471 ಭಕ್ತಾದಿಗಳು ಯಾತ್ರೆಗೆ ತೆರಳಿದ್ದಾರೆ.

38 ದಿನಗಳ ವಾರ್ಷಿಕ ಅಮರನಾಥ ಯಾತ್ರೆಗೆ ಎರಡು ಮಾರ್ಗದಲ್ಲಿ ಯಾತ್ರಿಕರು ತೆರಳಲಿದ್ದಾರೆ. ಈ ಬಾರಿಯ ಯಾತ್ರೆಯು ಆಗಸ್ಟ್‌ 9ಕ್ಕೆ ಸಂಪೂರ್ಣಗೊಳ್ಳಲಿದೆ.

ಇದುವರೆಗೂ 2.35 ಲಕ್ಷ ಭಕ್ತಾದಿಗಳು ಅಮರನಾಥನ ದರ್ಶನ ಪಡೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.