ಲಖನೌ: ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಅವರನ್ನು ನಿಜವಾದ ‘ಭಾರತ ರತ್ನ’ ಮತ್ತು ‘ಪ್ರಜಾಪ್ರಭುತ್ವದ ಜೀವಂತ ಶಾಲೆ’ ಎಂದು ಬಣ್ಣಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟವು ಯಾವಾಗಲೂ ಜನರಿಗೆ ಸ್ಫೂರ್ತಿ ನೀಡುತ್ತದೆ. ಎಲ್ಲರನ್ನೂ ಒಳಗೊಂಡ, ಎಲ್ಲರನ್ನೂ ಒಳಗೊಳ್ಳುವ, ಅತ್ಯುತ್ತಮ ಪ್ರಜಾಪ್ರಭುತ್ವ ಮೌಲ್ಯಗಳಿಂದ ತುಂಬಿದ ಮತ್ತು ಒಂದು ಭಾರತ, ಶ್ರೇಷ್ಠ ಭಾರತ (one India, great India) ಎಂಬ ಮನೋಭಾವವನ್ನು ಶ್ರೀಮಂತಗೊಳಿಸಿದ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ನಮನಗಳು’ ಎಂದು ಬರೆದುಕೊಂಡಿದ್ದಾರೆ.
ಅವರು ನಿಜವಾದ ಅರ್ಥದಲ್ಲಿ ‘ಭಾರತ ರತ್ನ’ ಮತ್ತು ಪ್ರಜಾಪ್ರಭುತ್ವದ ಜೀವಂತ ಶಾಲೆ’ಯಾಗಿದ್ದರು. ಸಮಾನತೆ ಮತ್ತು ನ್ಯಾಯ-ಪ್ರೀತಿಯ ಸಮಾಜವನ್ನು ಸ್ಥಾಪಿಸಲು ಅವರ ಹೋರಾಟವು ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತದೆ ಎಂದು ಆದಿತ್ಯನಾಥ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.