ADVERTISEMENT

ರಾಹುಲ್ ಪರಿಶ್ರಮ ಜನರು ಅರ್ಥೈಸಬೇಕು ಎಂದ ವಾದ್ರಾ

ಪಿಟಿಐ
Published 14 ಆಗಸ್ಟ್ 2025, 14:18 IST
Last Updated 14 ಆಗಸ್ಟ್ 2025, 14:18 IST
ಉದ್ಯಮಿ ರಾಬರ್ಟ್ ವಾದ್ರಾ
ಉದ್ಯಮಿ ರಾಬರ್ಟ್ ವಾದ್ರಾ   

ಚಂಡೀಗಡ: ರಾಹುಲ್‌ ಗಾಂಧಿ ಅವರ ‘ಮತಗಳ್ಳತನ’ ಆರೋಪದ ಬಗ್ಗೆ ಪ್ರತಿಕ್ರಿಯಿಸಿರುವ ಅವರ ಬಾವ, ಉದ್ಯಮಿ ರಾಬರ್ಟ್ ವಾದ್ರಾ, ಜನರು ರಾಹುಲ್ ಅವರ ಕಠಿಣ ಪರಿಶ್ರಮವನ್ನು ಅರ್ಥ ಮಾಡಿಕೊಳ್ಳಬೇಕು, ಇಲ್ಲವೆಂದರೆ ಬಿಜೆಪಿ ‘ತಪ್ಪಾದ ದಾರಿ’ಯಲ್ಲಿ ಚುನಾವಣೆಯನ್ನು ಗೆಲ್ಲುತ್ತಲೆ ಇರುತ್ತದೆ ಎಂದು ಗುರುವಾರ ಹೇಳಿದರು.

ಹರಿಯಾಣದ ಪಂಚಕುಲದಲ್ಲಿರುವ ನಾಡಾ ಸಾಹಿಬ್ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿ ಮಾತನಾಡಿದ ವಾದ್ರಾ, ‘ಕೇಂದ್ರ ಸರ್ಕಾರ ಎಲ್ಲಾ ರೀತಿಯಲ್ಲೂ ತಪ್ಪು ಮಾಡುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಅದು ನಿಲ್ಲಬೇಕು. ರಾಹುಲ್ ಗಾಂಧಿ ಆಧಾರವನ್ನು ನೀಡಿದ್ದು, ಎಲ್ಲವೂ ಅದರಲ್ಲಿದೆ’ ಎಂದರು.

‘ನಾವು ಈಗಲೇ ಜಾಗೃತರಾಗಿದ್ದರೆ, ಈ ಸರ್ಕಾರ ಚುನಾವಣೆಗಳನ್ನು ತಪ್ಪಾದ ದಾರಿಯಲ್ಲಿ ಗೆಲ್ಲುವುದನ್ನು ಮುಂದುವರೆಸುತ್ತದೆ. ಅ ಮೂಲಕ ಜನರನ್ನು ಇನ್ನಷ್ಟು ತೊಂದರೆಗೆ ಸಿಲುಕಿಸುತ್ತದೆ’ ಎಂದು ವಾದ್ರಾ ಹೇಳಿದರು. 

ADVERTISEMENT

‘ದೇಶದಲ್ಲಿ ಶಾಂತಿ ಮತ್ತು ಪರಸ್ಪರ ಸಹೋದರತ್ವ ಇರಬೇಕು. ನನ್ನ ಧಾರ್ಮಿಕ ಪ್ರವಾಸ ದೇಶಾದ್ಯಂತ ನಡೆಯುತ್ತದೆ, ನಾನು ಇಲ್ಲಿಗೆ ಬಂದು ತಲೆ ಬಾಗಿದ್ದೇನೆ’ ಎಂದು ಹೇ‌ಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.