ADVERTISEMENT

ನ್ಯಾ. ಸುದರ್ಶನ ರೆಡ್ಡಿ ನಕ್ಸಲ್‌ ಬೆಂಬಲಿಗರು: ಅಮಿತ್‌ ಶಾ

ಪಿಟಿಐ
Published 22 ಆಗಸ್ಟ್ 2025, 16:01 IST
Last Updated 22 ಆಗಸ್ಟ್ 2025, 16:01 IST
ಅಮಿತ್‌ ಶಾ
ಅಮಿತ್‌ ಶಾ   

ಕೊಚ್ಚಿ: ವಿರೋಧ ಪಕ್ಷಗಳ ಉಪರಾಷ್ಟ್ರಪತಿ ಅಭ್ಯರ್ಥಿ ನ್ಯಾ. ಬಿ.ಸುದರ್ಶನ ರೆಡ್ಡಿ ಅವರು ನಕ್ಸಲರನ್ನು ಬೆಂಬಲಿಸುತ್ತಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಆರೋಪಿಸಿದರು.

ಸುದರ್ಶನ ರೆಡ್ಡಿ ಅವರು ‘ಸಲ್ವಾ ಜುಡೂಮ್‌’ ಕುರಿತು ತೀರ್ಪು ನೀಡದಿದ್ದರೆ 2020ರ ಒಳಗಾಗಿ ನಕ್ಸಲ್‌ವಾದ ಅಂತ್ಯವಾಗುತ್ತಿತ್ತು ಎಂದು ಅವರು ಹೇಳಿದರು.

‘ಮನೋರಮಾ ನ್ಯೂಸ್‌‘ ಸಮಾವೇಶದಲ್ಲಿ ಶುಕ್ರವಾರ ಮಾತನಾಡಿದ ಅವರು, ಉಪರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಯು ಕೇರಳದಲ್ಲಿ ಕಾಂಗ್ರೆಸ್‌ ಪಕ್ಷವು ಗೆಲುವು ಸಾಧಿಸುವ ಅವಕಾಶವನ್ನು ಮತ್ತಷ್ಟು ಕ್ಷೀಣಿಸುವಂತೆ ಮಾಡಿದೆ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.