ಅಸ್ಸಾಂನ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ಗೋಲಾಪ್ ಬೋರ್ಬೊರಾ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್ ಶಾ
ಪಿಟಿಐ
ಗುವಾಹಟಿ: ಭಾರತವನ್ನು ನುಸುಳುಕೋರರಿಂದ ಮುಕ್ತಗೊಳಿಸುವ ಭರವಸೆಯನ್ನು ಬಿಜೆಪಿ ಉಳಿಸಿಕೊಳ್ಳುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ತಿಳಿಸಿದ್ದಾರೆ.
ಅಸ್ಸಾಂನ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ಗೋಲಾಪ್ ಬೋರ್ಬೊರಾ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.
ಪ್ರಧಾನಿ ಮೋದಿ ಅವರು ಗಣರಾಜೋತ್ಸವದ ಭಾಷಣದಲ್ಲಿ ಕೇಂದ್ರವು ಭೌಗೋಳಿಕ ಯೋಜನೆಯನ್ನು ಹಮ್ಮಿಕೊಳ್ಳುವುದಾಗಿ ತಿಳಿಸಿದ್ದರು. ನುಸುಳುಕೋರರನ್ನು ಪತ್ತೆ ಹಚ್ಚಲು ಇದು ನಿರ್ಣಾಯಕ ಹಂತವಾಗಿದೆ. ದೇಶದಲ್ಲಿ ಒಬ್ಬನೇ ಒಬ್ಬ ನುಸುಳುಕೋರ ಇರಬಾರದು ಎಂದು ಹೇಳಿದ್ದಾರೆ.
‘ನುಸುಳುಕೋರರನ್ನು ತಡೆಗಟ್ಟುವುದಾಗಿ ನಾವು ಅಸ್ಸಾಂನ ಜನತೆಗೆ ಭರವಸೆ ನೀಡಿದ್ದೆವು. ಆದರೆ ಕಳೆದ 10 ವರ್ಷಗಳಲ್ಲಿ ಅದನ್ನು ಸಾಧಿಸಲು ಆಗಿಲ್ಲ. ಆದರೆ ನಾವು ಅಸ್ಸಾಂ ಸೇರಿದಂತೆ ಇಡೀ ಭಾರತವನ್ನು ವಿದೇಶಿ ನುಸುಳುಕೋರ ಮುಕ್ತವನ್ನಾಗಿ ಮಾಡುವ ಪ್ರತಿಜ್ಞೆ ಮಾಡುತ್ತೇವೆ’ ಎಂದಿದ್ದಾರೆ.
ಚುನಾವಣಾ ಆಯೋಗವು ಎಸ್‌ಐಆರ್ ಮೂಲಕ ಮತದಾರರ ಪಟ್ಟಿಯನ್ನು ಸ್ವಚ್ಛಗೊಳಿಸುತ್ತಿದೆ. ಆದರೆ, ಕೆಲವು ಪಕ್ಷಗಳು ಇದನ್ನು ವಿರೋಧಿಸುತ್ತಿವೆ. ಇದು ಇವತ್ತಿನ ರಾಜಕೀಯದಲ್ಲಿನ ನೈತಿಕ ಅವನತಿ ತೋರಿಸುತ್ತದೆ ಎಂದು ಪರೋಕ್ಷವಾಗಿ ‘ಇಂಡಿಯಾ’ ಮೈತ್ರಿಕೂಟದ ವಿರುದ್ಧ ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.