ADVERTISEMENT

ಅಹಮದಾಬಾದ್‌ ವಿಶ್ವದ ಅತಿದೊಡ್ಡ ‘ಹಸಿರು ನಗರಿ’ಯಾಗಬೇಕು: ಅಮಿತ್‌ ಶಾ

ಪಿಟಿಐ
Published 22 ಜೂನ್ 2021, 10:27 IST
Last Updated 22 ಜೂನ್ 2021, 10:27 IST
ಅಹಮದಾಬಾದ್‌ನ ಸಿಂಧು ಭವನ ರಸ್ತೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಗಿಡ ನೆಟ್ಟರು                  –ಟ್ವಿಟರ್‌ ಚಿತ್ರ
ಅಹಮದಾಬಾದ್‌ನ ಸಿಂಧು ಭವನ ರಸ್ತೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಗಿಡ ನೆಟ್ಟರು                  –ಟ್ವಿಟರ್‌ ಚಿತ್ರ   

ಅಹಮದಾಬಾದ್: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ತಾವು ಪ್ರತಿನಿಧಿಸುವ ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ ಮಂಗಳವಾರ ಗಿಡಗಳನ್ನು ನೆಟ್ಟರು.

ಅಹಮದಾಬಾದ್ ಮಹಾನಗರ ಪಾಲಿಕೆಯ (ಎಎಂಸಿ) ವ್ಯಾಪ್ತಿಗೆ ಒಳಪಡುವ ಬೋಡಕ್ ದೇವ್ ಪ್ರದೇಶದ ಸಿಂಧು ಭವನ ರಸ್ತೆಯಲ್ಲಿ ಅಮಿತ್‌ ಶಾ ಅವರು ಮೂರು ಸಸಿಗಳನ್ನು ನೆಟ್ಟರು. ಈ ವೇಳೆ ಪಾಲಿಕೆಯ ಸದಸ್ಯರು ಉಪಸ್ಥಿತರಿದ್ದರು.

‘ಅಹಮದಾಬಾದ್‌ ನಗರವನ್ನು ವಿಶ್ವದ ಅತಿದೊಡ್ಡ ‘ಹಸಿರು ನಗರಿ’ಯನ್ನಾಗಿ ಮಾಡಲು ನಗರ ಪಾಲಿಕೆಯ ಸಂಪೂರ್ಣ ತಂಡ ಶ್ರಮಿಸಬೇಕು. ನಾಗರಿಕರೂ ಮೂರು–ನಾಲ್ಕು ಪೀಳಿಗೆಗೆ ಆಮ್ಲಜನಕ ನೀಡುವಂತಹ ವಿವಿಧ ಗಿಡಗಳನ್ನು ನೆಡಬೇಕು’ ಎಂದು ಅವರು ಕೋರಿದರು.

ADVERTISEMENT

‘ಗಾಂಧಿನಗರ ಲೋಕಸಭಾ ಕ್ಷೇತ್ರದಲ್ಲಿ 11 ಲಕ್ಷ ಗಿಡಗಳನ್ನು ನೆಡುವ ಗುರಿಯನ್ನು ಹೊಂದಿದ್ದೇವೆ. ಇದಕ್ಕೆ ಸರ್ಕಾರಿ ಸಂಸ್ಥೆ ಮತ್ತು ಇಲಾಖೆಗಳೊಂದಿಗೆ ನಾಗರಿಕರೂ ಕೈ ಜೋಡಿಸಬೇಕು’ ಎಂದು ಅವರು ಕರೆ ‌ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.