ADVERTISEMENT

ಗೋವಾ: 3 ಕ್ಷೇತ್ರಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಇಂದು

ಪಿಟಿಐ
Published 29 ಜನವರಿ 2022, 20:59 IST
Last Updated 29 ಜನವರಿ 2022, 20:59 IST

ಪಣಜಿ: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಗೋವಾಕ್ಕೆ ಭಾನುವಾರ ಭೇಟಿ ನೀಡಲಿದ್ದಾರೆ. ಈ ವೇಳೆ ಗೋವಾದ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ.

ಪೊಂಡಾ, ಸಾನ್ವೋಡ್‌ಡೆಮ್‌ ಮತ್ತು ವಾಸ್ಕೊ ವಿಧಾನಸಭಾ ಕ್ಷೇತ್ರಗಳಲ್ಲಿ ಅವರುಒಳಾಂಗಣ ಸಭೆ ನಡೆಸಲಿದ್ದಾರೆ. ಭಾನುವಾರ ಸಂಜೆ 4:30ಕ್ಕೆ ಪೊಂಡಾದಲ್ಲಿ, 6:30ಕ್ಕೆ ಸಾನ್ವೋಡ್‌ಡೆಮ್‌ನಲ್ಲಿ ಮತ್ತು ರಾತ್ರಿ 8 ಗಂಟೆಗೆ ವಾಸ್ಕೊದಲ್ಲಿ ಸಭೆಗಳು ಆಯೋಜನೆ ಆಗಿವೆ ಎಂದು ಗೋವಾ ಬಿಜೆಪಿ ಅಧ್ಯಕ್ಷ ಸದಾನಂದ್‌ ಶೇಟ್‌ ತಾನವಾಡೆ ತಿಳಿಸಿದ್ದಾರೆ.

ಈ ಎಲ್ಲಾ ಸಭೆಗಳೂ ಒಳಾಂಗಣದಲ್ಲೇ ನಡೆಯಲಿವೆ. ಶೇ 50ರಷ್ಟು ಆಸನಗಳನ್ನು ಮಾತ್ರ ಭರ್ತಿ ಮಾಡಲಾಗುವುದು. ಕೋವಿಡ್‌–19ಗೆ ಸಂಬಂಧಿಸಿದ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ವಾಸ್ಕೊದಲ್ಲಿ ನಡೆಯುವ ರ‍್ಯಾಲಿಯ ನೇರ ಪ್ರಸಾರವನ್ನು ಇತರ 10 ಕ್ಷೇತ್ರಗಳಲ್ಲಿ ಮಾಡಲಾಗುವುದು ಎಂದು ಹೇಳಿದ್ದಾರೆ.

ADVERTISEMENT

ಚುನಾವಣೆ ದಿನಾಂಕ ಘೋಷಣೆ ಆದ ಬಳಿಕ ಇದೇ ಮೊದಲ ಬಾರಿಗೆ ಬಿಜೆಪಿಯ ತಾರಾ ಪ್ರಚಾರಕರೊಬ್ಬರು ಗೋವಾಕ್ಕೆ ಬಂದು ಸಭೆ ನಡೆಸಲಿದ್ದಾರೆ. ಗೋವಾ ವಿಧಾನಸಭೆಯ ಎಲ್ಲ 40 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಬಿಜೆಪಿ ಕಣಕ್ಕಿಳಿಸಿದೆ. ಪೊಂಡಾ, ಸಾನ್ವೋಡ್‌ಡೆಮ್‌ ಮತ್ತು ವಾಸ್ಕೊ ಕ್ಷೇತ್ರಗಳಲ್ಲಿ ಕ್ರಮವಾಗಿ ರವಿ ನಾಯ್ಕ್‌, ಗಣೇಶ್‌ ಗಾಂವ್ಕರ್‌ ಮತ್ತು ದಾಜಿ ಸಲ್ಕಾರ್‌ ಅವರು ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.