ADVERTISEMENT

ಮಾರ್ಚ್‌ 1ರಿಂದ ಅಮೂಲ್‌ ಹಾಲಿನ ದರ ಹೆಚ್ಚಳ

ಪಿಟಿಐ
Published 28 ಫೆಬ್ರುವರಿ 2022, 14:23 IST
Last Updated 28 ಫೆಬ್ರುವರಿ 2022, 14:23 IST
–ಪ್ರಾತಿನಿಧಿಕ ಚಿತ್ರ
–ಪ್ರಾತಿನಿಧಿಕ ಚಿತ್ರ   

ಅಹಮದಾಬಾದ್‌: ಅಮೂಲ್‌ನ ತಾಜಾ ಹಾಲಿನ ದರವನ್ನು ಮಾರ್ಚ್‌ 1ರಿಂದ ದೇಶದಾದ್ಯಂತ ಲೀಟರ್‌ಗೆ ₹2ರಂತೆ ಹೆಚ್ಚಿಸಲಾಗುವುದು ಎಂದು ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್‌) ಸೋಮವಾರ ಹೇಳಿದೆ.

ಗುಜರಾತ್‌ನ ಅಹಮದಾಬಾದ್‌ ಮತ್ತು ಸೌರಾಷ್ಟ್ರ ಮಾರುಕಟ್ಟೆಯಲ್ಲಿ ಅಮೂಲ್‌ ಗೋಲ್ಡ್‌ ಹಾಲಿನ ದರ ಅರ್ಧ ಲೀಟರ್‌ಗೆ ₹30, ಅಮೂಲ್‌ ತಾಜಾ ಹಾಲಿನ ದರ ಅರ್ಧ ಲೀಟರ್‌ಗೆ ₹24 ಮತ್ತು ಅಮೂಲ್‌ ಶಕ್ತಿ ಹಾಲಿನ ದರ ಅರ್ಧ ಲೀಟರ್‌ಗೆ ₹27 ಆಗಲಿದೆ ಎಂದು ಜಿಸಿಎಂಎಂಎಫ್‌ ಹೇಳಿಕೆಯಲ್ಲಿ ತಿಳಿಸಿದೆ.

ಕಳೆದ ಎರಡು ವರ್ಷಗಳಲ್ಲಿ ಅಮೂಲ್ ತಾಜಾ ಹಾಲಿನ ಬೆಲೆಯನ್ನು ವಾರ್ಷಿಕವಾಗಿ ಕೇವಲ ಶೇ 4ರಷ್ಟು ಮಾತ್ರ ಹೆಚ್ಚಿಸಲಾಗಿದೆ ಎಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.