ADVERTISEMENT

ಶತಾಬ್ಧಿ ರೈಲಿನ ಎ.ಸಿ ಕೋಚ್‌ನಲ್ಲಿ ಹೋಳಿ ಆಚರಣೆ: IRCTC ಸಿಬ್ಬಂದಿ ಬಂಧನ

ರೈಲಿನ ಎ.ಸಿ ಕೋಚ್‌ನಲ್ಲಿ ಹೋಳಿ ಆಚರಿಸಿದ್ದಕ್ಕೆ ಐಆರ್‌ಸಿಟಿಸಿಯ ಪ್ಯಾಂಟ್ರಿ ಹಾಗೂ ಸ್ವಚ್ಛತಾ ಸಿಬ್ಬಂದಿಯನ್ನು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಮಾರ್ಚ್ 2025, 7:26 IST
Last Updated 19 ಮಾರ್ಚ್ 2025, 7:26 IST
<div class="paragraphs"><p>ರೈಲು</p></div>

ರೈಲು

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ರೈಲಿನ ಎ.ಸಿ ಕೋಚ್‌ನಲ್ಲಿ ಹೋಳಿ ಆಚರಿಸಿದ್ದಕ್ಕೆ ಐಆರ್‌ಸಿಟಿಸಿಯ ಪ್ಯಾಂಟ್ರಿ ಹಾಗೂ ಸ್ವಚ್ಛತಾ ಸಿಬ್ಬಂದಿಯನ್ನು ಆರ್‌ಪಿಎಫ್ ಪೊಲೀಸರು ಬಂಧಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

ADVERTISEMENT

ದೆಹಲಿ–ಕಾನ್ಪುರ್ ಶತಾಬ್ದಿ ರೈಲಿನಲ್ಲಿ ಮಾರ್ಚ್ 14 ರಂದು ಈ ಘಟನೆ ನಡೆದಿತ್ತು. ಇನ್‌ಸ್ಟಾಗ್ರಾಂ ಬಳಕೆದಾರರೊಬ್ಬರು ಆರ್‌ಪಿಎಫ್ ಅಧಿಕಾರಿಗೆ ಘಟನೆಯ ವಿಡಿಯೊ ಕಳುಹಿಸಿ ಕ್ರಮವಹಿಸುವಂತೆ ಆಗ್ರಹಿಸಿದ್ದರು.

ಐಆರ್‌ಸಿಟಿಸಿಯ ಪ್ಯಾಂಟ್ರಿ ಹಾಗೂ ಸ್ವಚ್ಛತಾ ವಿಭಾಗದ 12 ಸಿಬ್ಬಂದಿಗಳು ಘಟನೆಯಲ್ಲಿ ಭಾಗಿಯಾಗಿದ್ದರು. ಅವರನ್ನು ಬಂಧಿಸಲಾಗಿದೆ ಎಂದು ಕಾನ್ಪುರ್ ವಿಭಾಗದ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಅಂದು ಶತಾಬ್ಧಿ ರೈಲಿನ ಎ.ಸಿ ಕೋಚ್‌ನಲ್ಲಿ ಸಿಬ್ಬಂದಿಗಳು ಹೋಳಿ ಆಚರಿಸಿ ಬಣ್ಣ, ಗುಲಾಲ್ ಎರಚಿದ್ದರು. ಇದರಿಂದ ಪ್ರಯಾಣಿಕರಿಗೂ ತೊಂದರೆ ಆಗಿದ್ದಲ್ಲದೇ ರೈಲಿನ ಸ್ವಚ್ಚತೆಗೂ ದಕ್ಕೆ ಬಂದಿತ್ತು. ರೈಲ್ವೆ ಆಸ್ತಿ–ಪಾಸ್ತಿ ಹಾನಿ ಪ್ರಕರಣದ ಅಡಿ ಕ್ರಮ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೆ ಸಿಬ್ಬಂದಿಯೇ ಈ ರೀತಿ ಮಾಡಿರುವುದು ಒಂದು ಗಂಭೀರ ಪ್ರಕರಣ ಎಂದು ಅವರು ತಿಳಿಸಿದ್ದಾರೆ. ಈ ಕುರಿತು ನ್ಯೂಸ್ 18 ವೆಬ್‌ಸೈಟ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.