ADVERTISEMENT

ಎರಡು ಗಂಟೆಗಳಲ್ಲಿ 9 ಬಾರಿ ಕಂಪಿಸಿದ ಭೂಮಿ

ಅಂಡಮಾನ್‌–ನಿಕೋಬಾರ್‌ ದ್ವೀಪ ಸಮೂಹ

ಪಿಟಿಐ
Published 1 ಏಪ್ರಿಲ್ 2019, 20:06 IST
Last Updated 1 ಏಪ್ರಿಲ್ 2019, 20:06 IST

ನವದೆಹಲಿ: ಅಂಡಮಾನ್‌ ನಿಕೋಬಾರ್‌ ದ್ವೀಪ ಸಮೂಹಗಳಲ್ಲಿ ಸೋಮವಾರ ಬೆಳಿಗ್ಗೆ 9 ಬಾರಿ ಭೂಮಿ ಕಂಪಿಸಿದೆ. ಕಂಪನದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 4.7ರಿಂದ 5.2ರಷ್ಟು ದಾಖಲಾಗಿದೆ ಎಂದುನ್ಯಾಷನಲ್‌ ಸೆಂಟರ್‌ಫಾರ್‌ ಸೀಸ್ಮಾಲಜಿ (ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ) ಹೇಳಿದೆ.

ಬೆಳಗಿನ ಜಾವ 5.14ರ ವೇಳೆಗೆ ಸಂಭವಿಸಿದ ಮೊದಲ ಕಂಪನದ ತೀವ್ರತೆ 4.9ರಷ್ಟು ದಾಖಲಾಗಿದೆ. ಎರಡು ನಿಮಿಷಗಳ ನಂತರ ಮತ್ತೆ ಕಂಪಿಸಿದೆ. ಇದರ ಪ್ರಮಾಣ 5ರಷ್ಟು ದಾಖಲಾಗಿದೆ. ಬೆಳಿಗ್ಗೆ 6.54ರ ವೇಳೆಗೆ ಮತ್ತೆ 5.2ರಷ್ಟು ಪ್ರಮಾಣದಲ್ಲಿ ಭೂಮಿ ಕಂಪಿಸಿದೆ ಎಂದು ಕೇಂದ್ರದ ವರದಿ ಹೇಳಿದೆ.

ಅಂಡಮಾನ್‌ ನಿಕೋಬಾರ್‌ ದ್ವೀಪಸಮೂಹಗಳು ಸದಾ ಭೂಕಂಪ ಪೀಡಿತ ಪ್ರದೇಶಗಳೇ ಆಗಿವೆ. ದ್ವೀಪಗಳಲ್ಲಿ ಪ್ರತಿದಿನ 2ರಿಂದ 3 ಬಾರಿ ಭೂಮಿ ಕಂಪಿಸುವುದು ಸಾಮಾನ್ಯ ಎಂದು ಕೇಂದ್ರ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.