ADVERTISEMENT

ಆಂಧ್ರ, ತೆಲಂಗಾಣ ಎಂಎಲ್‌ಸಿ ಚುನಾವಣೆ: ಅಭ್ಯರ್ಥಿಗಳ ಹೆಸರು ಘೋಷಿಸಿದ ಬಿಜೆಪಿ

ಪಿಟಿಐ
Published 14 ಫೆಬ್ರುವರಿ 2023, 12:37 IST
Last Updated 14 ಫೆಬ್ರುವರಿ 2023, 12:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಮರಾವತಿ: ಮಾರ್ಚ್ 13 ರಂದು ನಡೆಯಲಿರುವ ತೆಲಂಗಾಣ ವಿಧಾನ ಪರಿಷತ್ತು ಮತ್ತು ಆಂಧ್ರ ವಿಧಾನ ಪರಿಷತ್ತಿನ ಚುನಾವಣೆಯ 3 ಪದವೀಧರ ಮತ್ತು 1 ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಮಂಗಳವಾರ ಘೋಷಿಸಿದೆ.

ಪ್ರಕಾಶಂ–ನೆಲ್ಲೂರು–ಚಿತ್ತೂರ್ ಕ್ಷೇತ್ರಕ್ಕೆ ಸಣ್ಣಾರೆಡ್ಡಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಕಡಪ–ಅನಂತಪುರ–ಕರ್ನೂಲ್ ಅಭ್ಯರ್ಥಿಯಾಗಿ ನಾಗರೂರು ರಾಘವೇಂದ್ರ, ಶ್ರೀಕಾಕುಲಂ–ವಿಜಯನಗರ–ವಿಶಾಖಪಟ್ಟಣ ಅಭ್ಯರ್ಥಿಯಾಗಿ ಪಿ.ವಿ. ಎನ್ ಮಾದವ್ ಹೆಸರನ್ನು ಘೋಷಿಸಲಾಗಿದೆ. ತೆಲಂಗಾಣದಲ್ಲಿ ಶಿಕ್ಷಕರ ಕ್ಷೇತ್ರಕ್ಕೆ (ಮೆಹಬೂಬ್ ನಗರ–ರಂಗರೆಡ್ಡಿ–ಹೈದರಬಾದ್ ) ಎ. ವೆಂಕಟ ನಾರಯಣ್ ಸ್ಪರ್ದಿಸಲ್ಲಿದ್ದಾರೆ.

ಕೇಂದ್ರ ಚುನಾವಣಾ ಆಯೋಗವು ಫೆಬ್ರುವರಿ 16 ರಂದು ಚುನಾವಣಾ ದಿನಾಂಕದ ಅಧಿಸೂಚನೆ ಹೊರಡಿಸುವುದಾಗಿ ತಿಳಿಸಿದೆ. ಫೆಬ್ರುವರಿ 23 ನಾಮನಿರ್ದೇಶನ ಮಾಡಲು ಕೊನೆಯ ದಿನವಾಗಿದ್ದು, ಮರುದಿನ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮನಿರ್ದೇಶನ ಪತ್ರ ಹಿಂಪಡೆಯಲು ಫೆಬ್ರುವರಿ 27 ಕೊನೆಯ ದಿನವಾಗಿದೆ. ಮಾರ್ಚ್ 13 ರಂದು ಚುನಾವಣೆ ನಡೆಯಲಿದ್ದು, ಮಾರ್ಚ್ 16 ರಂದು ಮತ ಎಣಿಕೆ ಜರುಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.