ADVERTISEMENT

ಸಂಪತ್ತಿನ ಮೌಲ್ಯ ₹936 ಕೋಟಿ: ಚಂದ್ರಬಾಬು ನಾಯ್ಡು ದೇಶದ ಶ್ರೀಮಂತ ಮುಖ್ಯಮಂತ್ರಿ

ಪಿಟಿಐ
Published 23 ಆಗಸ್ಟ್ 2025, 13:12 IST
Last Updated 23 ಆಗಸ್ಟ್ 2025, 13:12 IST
<div class="paragraphs"><p>ಚಂದ್ರಬಾಬು ನಾಯ್ಡು</p></div>

ಚಂದ್ರಬಾಬು ನಾಯ್ಡು

   

ಹೈದರಾಬಾದ್‌: ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು ಅವರು ₹936 ಕೋಟಿ ಮೌಲ್ಯದ ಸಂಪತ್ತಿನೊಂದಿಗೆ ದೇಶದಲ್ಲೇ ಅತಿ ಶ್ರೀಮಂತ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್‌ (ಎಡಿಆರ್) ಇತ್ತೀಚಿನ ವರದಿಯಲ್ಲಿ ಈ ಮಾಹಿತಿ ನೀಡಿದೆ. 

ನಾಯ್ಡು ಅವರ ಸಂಪತ್ತಿನ ಸಿಂಹಪಾಲು ಅವರು ಪಾಲುದಾರಿಕೆ ಹೊಂದಿರುವ ಹೆರಿಟೇಜ್ ಫುಡ್ಸ್‌ ಲಿಮಿಟೆಡ್‌ನಿಂದಲೇ ಬಂದಿದೆ. 1992ರಲ್ಲಿ ಡೇರಿ ಕಂಪನಿಯನ್ನು (ಐಪಿಒ– ಸಾರ್ವಜನಿಕ ಷೇರು ಹಂಚಿಕೆ) ನಾಯ್ಡು ಅವರು ಸ್ಥಾಪನೆ ಮಾಡಿದ್ದರು.

ADVERTISEMENT

ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 30 ಮುಖ್ಯಮಂತ್ರಿಗಳು ಕಳೆದ ಚುನಾವಣೆ ವೇಳೆ ಸಲ್ಲಿಸಿದ್ದ ಪ್ರಮಾಣಪತ್ರಗಳಲ್ಲಿನ (ಅಫಿಡವಿಟ್) ಮಾಹಿತಿಯನ್ನು ಅವಲೋಕಿಸಿ ದೆಹಲಿ ಮೂಲದ ಎಡಿಆರ್ ಮತ್ತು ನ್ಯಾಷನಲ್ ಎಲೆಕ್ಷನ್‌ ವಾಚ್‌ (ಎನ್‌ಇಡಬ್ಲ್ಯು) ಸಂಸ್ಥೆಗಳು ವರದಿ ಸಿದ್ಧಪಡಿಸಿವೆ. 

ನಾಯ್ಡು ಅವರು ಹೆರಿಟೇಜ್‌ ಕಂಪನಿಯಲ್ಲಿ ₹2.26 ಕೋಟಿಗೂ ಹೆಚ್ಚು ಮೌಲ್ಯದ ಷೇರುಗಳನ್ನು ಹೊಂದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಕಂಪನಿಯ ಒಂದು ಷೇರಿನ ಮೌಲ್ಯ ₹337.85 ನಷ್ಟಿತ್ತು.

ನಾಯ್ಡು ಅವರ ಷೇರುಗಳ ಮೌಲ್ಯವೇ ₹763.93 ಕೋಟಿ. ವೈಯಕ್ತಿಕ ಸಾಲ, ಹೆರಿಟೇಜ್‌ ಉಪಾಧ್ಯಕ್ಷೆಯೂ ಆಗಿರುವ ಪತ್ನಿ ಹೆಸರಿನಲ್ಲಿ ಇರುವ  ಚಿನ್ನ,ಬೆಳ್ಳಿ ಆಭರಣ, ಕುಪ್ಪಂ, ಚಿತ್ತೂರು, ಹೈದರಾಬಾದ್‌ನಲ್ಲಿ ನಾಯ್ಡು ಕುಟುಂಬಕ್ಕೆ ಸೇರಿದ ಆಸ್ತಿಗಳ ಮೌಲ್ಯ ಉಳಿದ ಸಂಪತ್ತಿನ ಭಾಗವಾಗಿದೆ.

1995ರಲ್ಲಿ ಹೆರಿಟೇಜ್‌ ಮಾರುಕಟ್ಟೆ ಬಂಡವಾಳ ಗಾತ್ರ ₹25 ಕೋಟಿ ಇತ್ತು. 2025ರಲ್ಲಿ ಅದು ₹ 4,500 ಕೋಟಿಗೆ ತಲುಪಿದೆ. 2024ರಲ್ಲಿ ಅದು ₹6,755 ಕೋಟಿಗೆ ಮುಟ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.